ನವದೆಹಲಿ : ಚುನಾವಣೆ ಸನ್ನಿಹಿತವಾಗಿರುವ ಪಂಜಾಬ್ ರಾಜ್ಯದಲ್ಲಿ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಬದಲಾವಣೆ ಸೇರಿದಂತೆ ಸಿಧು ರಾಜೀನಾಮೆ ಹೀಗೆ ಸಾಕಷ್ಟು ಬದಲಾವಣೆಗಳು ನಡೆಯುತ್ತಲೇ ಇವೆ.
ಇದರ ಮಧ್ಯೆ ಮಾಜಿ ಸಿಎಂ ಕ್ಯಾಪ್ಟನ್ ಅಮರಿಂದರ್ ಸಿಂಗ್ ಬಿಜೆಪಿ ಸೇರಲಿದ್ದಾರೆ ಎನ್ನುವ ಮಾಹಿತಿ ಬೆನ್ನಲ್ಲೆ ಅಮಿತ್ ಷಾ ನಿವಾಸದಲ್ಲಿ ಕ್ಯಾಪ್ಟನ್ ಕಾಣಿಸಿಕೊಂಡಿದ್ದಾರೆ. ಈ ಮೂಲಕ ಅಮರಿಂದರ್ ಬಿಜೆಪಿ ಸೇರ್ಪಡೆ ಬಹುತೇಕ ಖಚಿತ ಎನ್ನುವ ಮಾತು ಹೆಚ್ಚುತ್ತಿವೆ.
ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರು ಬಿಜೆಪಿ ಸೇರುವ ಪ್ರಸ್ತಾಪವನ್ನು ಪರಿಗಣಿಸಬಹುದು ಎಂದು ಊಹಾಪೋಹಗಳು ಹರಿದಾಡುತ್ತಿವೆ.
ಆದಾಗ್ಯೂ, ಅಮಿತ್ ಶಾ ನಿವಾಸದಲ್ಲಿ ನಡೆಯುತ್ತಿರುವ ಸಭೆಯ ಕಾರ್ಯಸೂಚಿಯ ಬಗ್ಗೆ ಯಾವುದೇ ಹೇಳಿಕೆಗಳನ್ನು ನೀಡಲಾಗಿಲ್ಲ.
ಸಿಂಗ್ ಪರ ಬೆಂಬಲಿಗರು ಇದನ್ನು ;ಸೌಜನ್ಯದ ಭೇಟಿ' ಎಂದು ಕರೆದಿದ್ದಾರೆ. ಸಿಂಗ್ ಅವರ ಭವಿಷ್ಯದ ಯೋಜನೆಗಳ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡಲು ನಿರಾಕರಿಸಿದ್ದಾರೆ.
PublicNext
29/09/2021 06:23 pm