ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸ್ಮಾರ್ಟ್ ಫೋನ್, ವಾಟ್ಸ್'ಆ್ಯಪ್'ಲ್ಲೇ ಅದೃಷ್ಟ ಸಂಖ್ಯೆಯ ಆಟ; ಹೈಟೆಕ್ ದಂಧೆಗೆ ಬೇಕಿದೆ ಹೈಟೆಕ್ ಬ್ರೇಕ್...!

ಹುಬ್ಬಳ್ಳಿ; ಒಂದೆಡೆ ರಾಜ್ಯ ಸರ್ಕಾರ ಆನ್'ಲೈನ್ ಜೂಜು‌ ನಿಷೇಧಕ್ಕೆ ಮುಂದಾಗುತ್ತಿದ್ದರೆ, ಇನ್ನೊಂದೆಡೆ ಆಲ್'ಲೈನ್ ಮಟ್ಕಾ ಎಗ್ಗಿಲ್ಲದೆ ಅವ್ಯಾಹತವಾಗಿ ನಡೆಯುತ್ತಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಂತೂ ಅದರ ಆರ್ಭಟ ಜೋರಾಗಿದ್ದು, ವಿದ್ಯಾವಂತರು ಮಾತ್ರವಲ್ಲದೆ ಸ್ಮಾರ್ಟ್ ಪೋನ್ ಬಳಕೆಯ ಬಹುತೇಕರು ಆನ್ ಲೈನ್ ಮಟ್ಕಾದಲ್ಲಿ ಬಲಿಯಾಗುತ್ತಿದ್ದಾರೆ.

ಹೌದು.. ಸ್ಮಾರ್ಟ್ ಫೋನ್‍ಗಳು ಎಲ್ಲರ ಕೈಗೆ ಸುಲಭವಾಗಿ ಸಿಗುತ್ತಿದ್ದಂತೆ, ಆನ್‍ಲೈನ್ ಮಟ್ಕಾ ಸಹ ಹೆಚ್ಚು ಚಾಲ್ತಿಗೆ ಬರತೊಡಗಿತು. ಸಾಂಪ್ರದಾಯಿಕ ಮಟ್ಕಾಕ್ಕೆ ನಿರ್ದಿಷ್ಟ ಅಡ್ಡೆಗಳಿದ್ದಂತೆ, ಇದಕ್ಕೆ ಯಾವುದೇ ಅಡ್ಡೆಗಳೂ ಇಲ್ಲ. ಅವರವರ ಸ್ಮಾರ್ಟ್ ಫೋನ್'ಗಳೇ ಅಡ್ಡೆ, ಪರಿಚಯದವರೇ ಮಟ್ಕಾ ಗ್ರಾಹಕರು. ತಾವಿದ್ದಲ್ಲಿಂದಲೇ ವಾಟ್ಸ್'ಆ್ಯಪ್ ಮೂಲಕ ನಂಬರ್ ಕಳುಹಿಸಿ ಅದೃಷ್ಟದ ನಂಬರ್ ಗೇಮ್'ಲ್ಲಿ ಪಾಲ್ಗೊಳ್ಳುತ್ತಾರೆ. ಇಂಟರ್‍ನೆಟ್ ಬಳಕೆ ಹೆಚ್ಚಾದಂತೆ ಆನ್‍ಲೈನ್ ಮಟ್ಕಾ ಈಗ ಹೊಸ ಹೈಟೆಕ್ ರೂಪ ಪಡೆದುಕೊಂಡಿದೆ. ಆದರೆ ಗೃಹ ಸಚಿವರು ಮಾತ್ರ ಇದಕ್ಕೆ ಬ್ರೇಕ್ ಹಾಕಿಯೇ ತೀರುತ್ತೇವೆ ಅಂತಿದ್ದಾರೆ.

ಈ ಮೊದಲು ಟೀ ಅಂಗಡಿ, ಪಾನ್ ಶಾಪ್, ಕಿರಾಣಿ ಅಂಗಡಿಗಳಲ್ಲಿ‌ ಮಟ್ಕಾ ನಂಬರ್ ಬರಿಸಿ, ಅದೃಷ್ಟ ಎದುರು ನೋಡುತ್ತಿದ್ದರು. ಅದು ಸಹ ಬೆಳಿಗ್ಗೆ(ಮುಂಬೈ‌ ಮಟ್ಕಾ) ಮತ್ತು ಸಂಜೆ(ಕಲ್ಯಾಣಿ) ಎಂದು‌ ದಿನಕ್ಕೆ ಎರಡು ಬಾರಿ ಮಾತ್ರ. ಈಗ ಅದು ಆನ್'ಲೈನ್ ಆಗಿದ್ದರಿಂದ ಹಾಗೂ ದಿನದ 24 ಗಂಟೆಯೂ ನಂಬರ್ ಗೇಮ್ ಇರುವುದರಿಂದ ಜೂಜುಕೋರರು ಹೆಚ್ಚಿನ ಸಮಯ ಅಲ್ಲಿಯೇ ಕಳೆಯುತ್ತಿದ್ದಾರೆ. ಕಾರ್ಮಿಕರು, ಕೊಳಗೇರಿ ನಿವಾಸಿಗಳು, ಆಟೋ ಚಾಲಕರು, ದಿನಗೂಲಿ ನೌಕರರು, ಮಧ್ಯಮ ವರ್ಗದವರು ಈ ಆನ್‍ಲೈನ್ ಆಟಕ್ಕೆ ಸಿಲುಕಿ ಹಣ ಕಳೆದುಕೊಳ್ಳುತ್ತಿದ್ದಾರೆ.

ಆನ್‍ಲೈನ್ ಮಟ್ಕಾ ಹತ್ತಾರು ಸ್ವರೂಪಗಳಲ್ಲಿದ್ದು, ಅನೇಕ‌ ವೆಬ್‍ಸೈಟ್‍ಗಳನ್ನು ಹೊಂದಿವೆ. ವಿಭಿನ್ನ ರೀತಿಯ ಆಟಗಳಲ್ಲಿ ಜನರನ್ನು ಸೆಳೆದು ಅದರಲ್ಲಿ ತೊಡಗಿಸಿಕೊಳ್ಳುವಂತೆ ಮಾಡುತ್ತವೆ. ವೆಬ್'ಸೈಟ್'ಲ್ಲಿ ಇರುವ ನಂಬರಗೆ ಕರೆ ಮಾಡಿ ನೋಂದಣಿ ಮಾಡಿಕೊಂಡ ಏಜೆಂಟ್(ಬೀಟರ್)ರು ಜನರಿಂದ(ಆಟ ಆಡುವವರಿಂದ) ಹಣ ಸಂಗ್ರಹಿಸಿ ನಂಬರ್(ಅಂಕಿ) ಪಡೆಯುತ್ತಾರೆ. ನಿರ್ದಿಷ್ಟ ವೆಬ್‍ಸೈಟ್‍ನಲ್ಲಿ ನಿಗದಿತ ಸಮಯಕ್ಕೆ ಸಂಖ್ಯೆಗಳು ಬರುತ್ತವೆ. ಗಂಟೆಗೊಮ್ಮೆ ಇಂತಹ ಆಟಗಳು ಸಹ ಅಲ್ಲಿ‌ ನಡೆಯುತ್ತವೆ. ಇದಕ್ಕೆ ಕೂಡಲೇ ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮೀಷನರೇಟ್ ಬ್ರೇಕ್ ಹಾಕಬೇಕಿದೆ.

Edited By : Nagesh Gaonkar
PublicNext

PublicNext

29/09/2021 05:30 pm

Cinque Terre

82.26 K

Cinque Terre

1

ಸಂಬಂಧಿತ ಸುದ್ದಿ