ಮಂಡ್ಯ: ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರ ಪಂಚೆ ಕಳಚಿತ್ತು. ಇದಾದ ಕೆಲವೇ ದಿನದಲ್ಲಿ (ಇಂದು) ಸಚಿವ ಮಾಧುಸ್ವಾಮಿ ಅವರ ಪಂಚೆ ಕಳಚಿಕೊಂಡ ಪ್ರಸಂಗ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದಲ್ಲಿ ನಡೆದಿದೆ.
ಶ್ರೀರಂಗಪಟ್ಟಣ ತಾಲೂಕಿನ ಕೆಆರ್‌ಎಸ್ ಡೌನ್ ಸ್ಟ್ರೀಮ್ ಬ್ರಿಡ್ಜ್ ಬಳಿ ಬಳಘಟ್ಟ ಗ್ರಾಮ ಪಂಚಾಯತಿ ವ್ಯಾಪ್ತಿಯ 51 ಕೆರೆಗಳಿಗೆ ನೀರು ತುಂಬಿಸುವ ಯೋಜನೆ ಹಮ್ಮಿಕೊಳ್ಳಲಾಗಿತ್ತು. ಈ ಯೋಜನೆ ಉದ್ಘಾಟನೆಗೆ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿ ಆಗಮಿಸಿದ್ದರು. ಮೆಟ್ಟಿಲು ಹತ್ತುವ ವೇಳೆ ಸಚಿವ ಮಾಧುಸ್ವಾಮಿ ಪಂಚೆ ಕಳಚಿಕೊಂಡಿತು. ತಕ್ಷಣವೇ ಕೈಯಲ್ಲಿ ಹಿಡಿದುಕೊಂಡು ಸಾರ್ವಜನಿಕವಾಗಿಯೇ ಪಂಚೆಯನ್ನು ಸರಿಪಡಿಸಿಕೊಂಡರು.
PublicNext
29/09/2021 04:03 pm