ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನಾವು ಗಂಡಸರಲ್ವಾ…? ಟಿಕೆಟ್ ನಮ್ಗೆ ಕೊಡಿ: ಮನೋಹರ್ ತಹಶೀಲ್ದಾರ್

ಬೆಂಗಳೂರು: ಕಾಂಗ್ರೆಸ್ ನಲ್ಲಿ ಮತ್ತೆ ಬಂಡಾಯದ ಕೂಗು ಎದ್ದಿದೆ. ಹಾನಗಲ್ ಟಿಕೆಟ್ ಆಕಾಂಕ್ಷಿ ಮನೋಹರ್ ತಹಶೀಲ್ದಾರ್ ಹಿಂದಿನ ಅಭ್ಯರ್ಥಿ ಶ್ರೀನಿವಾಸ ಮಾನೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಕ್ಷೇತ್ರದಲ್ಲಿ ನಾವು ಗಂಡಸರಲ್ವಾ….? ಹೊರಗಿನವರು ಬಂದ್ರೆ ಅವರಿಗೆ ಟಿಕೆಟ್ ಕೊಟ್ಟರೆ ನಾವು ಕೆಲಸ ಮಾಡಲ್ಲ ಎಂದಿದ್ದಾರೆ.

ಸಿದ್ದರಾಮಯ್ಯ ಭೇಟಿಗೆ ಸಿದ್ದರಾಮಯ್ಯ ನಿವಾಸದ ಬಳಿ ಬಂದಿದ್ದ ಮನೋಹರ್ ತಹಶೀಲ್ದಾರ್ ಗೆ ಈಗ ಸಿದ್ದರಾಮಯ್ಯ ಭೇಟಿ ಸಾಧ್ಯ ಇಲ್ಲ ಎಂದು ತಿಳಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಬಾರಿ ನನಗೇ ಟಿಕೆಟ್ ಕೊಡಲೇಬೇಕು, ನಾವೇನು ಗಂಡಸರಲ್ವಾ..? ನಮಗೆ ಏಕೆ ಟಿಕೆಟ್ ನೀಡಲ್ಲ. ಶ್ರೀನಿವಾಸ್ ಮಾನೆ ಅವರಿಗೆ ಟಿಕೆಟ್ ಕೊಡಬಾರದು. ನಮ್ಮ ಕ್ಷೇತ್ರದಲ್ಲಿ ಬೇರೆಯವರಿಗೆ ಹೊರಗಿನವರಿಗೆ ಹೇಗೆ ಟಿಕೆಟ್ ಕೊಡ್ತಾರೆ.ಈ ಬಾರಿ ನಾವು ಇದನ್ನ ಸಹಿಸಲ್ಲ ಎಂದರು.

ಕಳೆದ ಚುನಾವಣೆಯಲ್ಲಿ ಶ್ರೀನಿವಾಸ್ ಮಾನೆ ಹಾನಗಲ್ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಈ ಬಾರಿ ಹಾನಗಲ್ ಕ್ಷೇತ್ರದಲ್ಲಿ ನನಗೆ ಟಿಕೆಟ್ ಕೊಡಬೇಕು. ನನಗೇ ಕೊಡಬೇಕು. ಅಕಸ್ಮಾತ್ ನನಗೆ ಕೊಡದಿದ್ದರೆ ಹಾನಗಲ್ ಕ್ಷೇತ್ರದ ಸ್ಥಳೀಯರಿಗೆ ಯಾರಿಗಾದ್ರೂ ಟಿಕೆಟ್ ಕೊಡಲಿ, ಆದರೆ ಹೊರಗಡೆಯಿಂದ ಬಂದಿರುವ ಟಿಕೆಟ್ ಕೊಟ್ಟರೆ ನಾವ್ಯಾರೂ ಕೆಲಸ ಮಾಡಲ್ಲ. ನಮ್ಮ ಮನೆಯನ್ನು ನಮ್ಮ ಮನೆಯ ಹಿರಿಯರು ನಡೆಸಬೇಕು. ಹೊರಗಿನವರಿಗೆ ನಮ್ಮ ಮನೆ ನಡೆಸಲು ನಾವೇಕೆ ಬಿಡಬೇಕು ಎಂದು ಹರಿಹಾಯ್ದರು.

Edited By : Nirmala Aralikatti
PublicNext

PublicNext

29/09/2021 01:59 pm

Cinque Terre

19.72 K

Cinque Terre

0

ಸಂಬಂಧಿತ ಸುದ್ದಿ