ದೆಹಲಿ: ಕಮ್ಯುನಿಸ್ಟ್ ಪಕ್ಷದಲ್ಲಿದ್ದ ಕನ್ಹಯ್ಯಾಕುಮಾರ್ ನಿನ್ನೆ ಮಂಗಳವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಅವರೊಂದಿಗೆ ಗುಜರಾತ್ ನ ದಲಿತ ಹೋರಾಟಗಾರ ಜಿಗ್ನೇಶ್ ಮೇವಾನಿ ಕೂಡ ಕಾಂಗ್ರೆಸ್ ಸೇರಿದ್ದಾರೆ.
ಇದರ ಬೆನ್ನಲ್ಲೇ ಈ ಹಿಂದೆ ಕಾಂಗ್ರೆಸ್ ಪಕ್ಷವನ್ನು ಸ್ವತಃ ಕನ್ಹಯ್ಯಾಕುಮಾರ್ ಅವರೇ ವಿರೋಧಿಸಿದ್ದ ವಿಡಿಯೋ ಈಗ ವೈರಲ್ ಆಗುತ್ತಿದೆ. ಬಹಿರಂಗ ಸಮಾವೇಶದಲ್ಲಿ ರೋಷಾವೇಶಗೊಂಡಿದ್ದ ಕನ್ಹಯ್ಯಾಕುಮಾರ್ "ದೇಶವನ್ನು ಹಾಳು ಮಾಡಲು ಕಾಂಗ್ರೆಸ್ ಪಕ್ಷ ಸಾಕು ಎಂಬರ್ಥದಲ್ಲಿ ಮಾತಾಡಿದ್ದಾರೆ. ಆದ್ರೆ ನಿನ್ನೆ ಮಂಗಳವಾರ ಕಾಂಗ್ರೆಸ್ ಸೇರ್ಪಡೆಗೊಂಡ ನಂತರದ ದಿನಗಳಲ್ಲಿ ಮಾಧ್ಯಮಗೋಷ್ಟಿಯಲ್ಲಿ ಮಾತನಾಡಿದ ಕನ್ಹಯ್ಯಾ, ದೇಶ ಉಳಿಸಲು ಕಾಂಗ್ರೆಸ್ ಅನಿವಾರ್ಯ ಎಂದಿದ್ದಾರೆ.
PublicNext
29/09/2021 12:23 pm