ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಆರ್ ಎಸ್ ಎಸ್ ಗೂ ತಾಲಿಬಾನಿಗೂ ಹೋಲಿಕೆ ಮಾಡ್ತಿದ್ದಾರೆ. ತಾಲಿಬಾನ್ ಇಲ್ಲಿದ್ದಿದ್ದರೆ ಸಿದ್ದರಾಮಯ್ಯ ಬದುಕಲು ಸಾಧ್ಯವಿತ್ತೇ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ ಹೇಳಿದ್ದಾರೆ.
ಸೋಮವಾರ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ತಾಲಿಬಾನ್ ನಮ್ಮಲ್ಲಿ ಇದ್ದಿದ್ರೆ ಸಿದ್ದರಾಮಯ್ಯನವರ ಪಂಚೆ ಅಲ್ಲ. ಅವರೂ ನೇತಾಡುವ ಪರಿಸ್ಥಿತಿ ಇಲ್ಲಿರುತ್ತಿತ್ತು. ಸುಳ್ಳು ಮತ್ತು ಸಿದ್ದರಾಮಯ್ಯ ಒಂದೇ ನಾಣ್ಯದ ಎರಡು ಮುಖಗಳು. ತಾಲಿಬಾನ್ ಏನು? ಬಿಜೆಪಿ ಏನು? ಆರ್ ಎಸ್ ಎಸ್ ಏನು? ಎಂಬುದನ್ನು ಅರ್ಥಮಾಡಿಕೊಳ್ಳಲಾಗದಷ್ಟೂ ವ್ಯತ್ಯಾಸ ಏನಾದರೂ ಆಗಿದೆಯೇ? ಪಿಎಫ್ ಐ, ಎಸ್ ಡಿ ಪಿ ಐ, ಎಂ ಐ ಎಂ ಇವರೆಲ್ಲರೊಂದಿಗೆ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ತುಕಡೇ ಗ್ಯಾಂಗ್ ಜೊತೆ ಕಾಂಗ್ರೆಸ್ ರಾಜಕಾರಣ ಮಾಡುತ್ತಿದೆ. ಇವರೊಂದಿಗೆ ಈಗ ತುಕಡೆ ಗ್ಯಾಂಗ್ ಸೇರಿಕೊಳ್ಳುತ್ತಿದೆ ಎಂದು ಸಿ.ಟಿ ರವಿ ಟೀಕಿಸಿದ್ದಾರೆ.
PublicNext
28/09/2021 12:37 pm