ಗದಗ: ನಮ್ಮ ಅವಧಿಯಲ್ಲಿ ಮಹದಾಯಿ ವಿವಾದಕ್ಕೆ ಖಂಡಿತ ತಾರ್ಕಿಕ ಅಂತ್ಯ ಸಿಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಮಾಧ್ಯಮದ ಜೊತೆಗೆ ಮಾತನಾಡಿದ ಅವರು, ಸುಪ್ರೀಂ ಕೋರ್ಟ್ ನಲ್ಲಿ ಸಮರ್ಥವಾಗಿ ವಾದ ಮಂಡಿಸಲಾಗಿದೆ. ಕೆಲವೇ ದಿನದಲ್ಲಿ ಮಾಡಿಫೈಡ್ ಪ್ರಾಜೆಕ್ಟ್ ರಿಪೋರ್ಟ್ ನ್ನು ಕೇಂದ್ರಕ್ಕೆ ಸಲ್ಲಿಸಲಾಗುತ್ತೆ.
ಅಗತ್ಯ ಕ್ರಮ ತೆಗೆದುಕೊಂಡು. ಕಾಮಗಾರಿ ಆರಂಭಕ್ಕೆ ಪ್ರಯತ್ನ ಮಾಡುತ್ತೇವೆ ಎಂದರು.
ಪಂಚಮಸಾಲಿ ಮೀಸಲಾತಿಗೆ ಹೋರಾಟ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಮೀಸಲಾತಿಗೆ ಹೋರಾಟ ಮಾಡೋದು ತಪ್ಪೇನಲ್ಲ. ಸರ್ಕಾರವಾಗಿ ನಾವು ಕಾನೂನು ಚೌಕಟ್ಟು ಹಾಗೂ ಸುಪ್ರೀಂ ಕೋರ್ಟ್ ಆದೇಶದಂತೆ ಕೆಲಸ ಮಾಡಬೇಕು. ಈಗಾಗಲೇ ಸದನದಲ್ಲಿ ಉತ್ತರ ಕೊಟ್ಟಿದ್ದೇನೆ. ಆಯೋಗ ಕೆಲಸ ಮಾಡ್ತಿದೆ. ಹಿಂದುಳಿದ ವರ್ಗಗಳ ಆಯೋಗದಿಂದ ಜಿಲ್ಲೆಗಳಿಂದ ಮಾಹಿತಿಯನ್ನು ಪಡೆಯಲಾಗುತ್ತಿದೆ.
ಆಯೋಗದಿಂದ ರಿಪೋರ್ಟ್ ಬಂದಮೇಲೆ ಸರ್ಕಾರ ಮುಂದಿನ ಕೆಲಸ ಮಾಡುತ್ತದೆ. ಸ್ವಾಮಿಗಳ ಜೊತೆ ಸಂಪರ್ಕದಲ್ಲಿದ್ದೇನೆ. ವಿಶ್ವಾಸ ಮೂಡಿಸುವಲ್ಲಿ ಯಶಸ್ವಿಯಾಗಲಿದ್ದೇನೆ ಎಂದು ಅವರು ಹೇಳಿದರು.
PublicNext
26/09/2021 09:32 pm