ಮುಲ್ಕಿ: ಮುಲ್ಕಿ ಬ್ಲಾಕ್ ಕಾಂಗ್ರೆಸ್ ಸಮಿತಿ ಮತ್ತು ಬ್ಲಾಕ್ ಕಾಂಗ್ರೆಸ್ ಅಲ್ಪಸಂಖ್ಯಾತ ವಿಭಾಗದ ಆಶ್ರಯದಲ್ಲಿ ಹಳೆಯಂಗಡಿ ಜಿಲ್ಲಾ ಪಂಚಾಯತ್ ಕ್ಷೇತ್ರ ವ್ಯಾಪ್ತಿಯ "ಅಲ್ಪಸಂಖ್ಯಾತರ ವಿಚಾರ ಸಂಕಿರಣ" ಹಳೆಯಂಗಡಿಯ ಹರಿ ಓಂ ಕಟ್ಟಡದ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಮಾಜೀ ಸಚಿವ ಅಭಯಚಂದ್ರ ಜೈನ್ ಉದ್ಘಾಟಿಸಿ ಮಾತನಾಡಿ ಕರ್ನಾಟಕದಲ್ಲಿ ಆಡಳಿತದಲ್ಲಿರುವ ಬಿಜೆಪಿ ಸರಕಾರದಲ್ಲಿ ಅಲ್ಪಸಂಖ್ಯಾತರಿಗೆ ಯಾವುದೇ ಸ್ಥಾನಮಾನ ಕೊಡದ ಬಿಜೆಪಿ ಪಕ್ಷ ಚುನಾವಣೆ ಬರುವಾಗ ಅಲ್ಪಸಂಖ್ಯಾತರ ಮತಬ್ಯಾಂಕ್ ವಿಭಜನೆಯ ಹುನ್ನಾರ ಮಾಡುತ್ತಿದ್ದು ಜಾಗೃತರಾಗಬೇಕಾಗಿದೆ. ಕಾಂಗ್ರೆಸ್ಸಿನಿಂದ ಮಾತ್ರ ಅಭಿವೃದ್ಧಿ ಸಾಧ್ಯ ಎಂದರು.
ಮುಖ್ಯ ಅತಿಥಿಗಳಾಗಿ ಮಂಗಳೂರು ಮಹಾ ನಗರ ಪಾಲಿಕೆಯ ಸದಸ್ಯ ಮೊಹಮ್ಮದ್ ನವಾಜ್ ಮಾತನಾಡಿ ದೇಶದಲ್ಲಿರುವ ಅಲ್ಪಸಂಖ್ಯಾತರ ಮೇಲೆ ಬಿಜೆಪಿ ಸರಕಾರ ದೌರ್ಜನ್ಯ ನಡೆಸುತ್ತಿದೆ, ಕೊರೋನಾ ಸಂದರ್ಭದಲ್ಲಿಯೂ ಅಲ್ಪಸಂಖ್ಯಾತರನ್ನು ನಿಂದಿಸುವ ಕೆಲಸ ನಡೆದಿತ್ತು ಎಂದು ನೆನಪಿಸಿದ ಅವರು ಮತೀಯವಾದಿ ಶಕ್ತಿಗಳನ್ನು ದೂರವಿಡಲು ಅಲ್ಪಸಂಖ್ಯಾತರು ಒಗ್ಗಟ್ಟಾಗಬೇಕಾಗಿದೆ ಎಂದರು.
ನಗರಪಾಲಿಕೆಯ ವಿಪಕ್ಷ ನಾಯಕ ವಿನಯರಾಜ್ ಮಾತನಾಡಿ ಅಲ್ಪಸಂಖ್ಯಾತರ ಮತ ವಿಭಜನೆಗೆ ಬಿಜೆಪಿ ಸರಕಾರ ಹುನ್ನಾರ ನಡೆಸುತ್ತಿದ್ದು "ಬಿಜೆಪಿ ಬಿ ಟೀಮ್ ಎಸ್ಡಿಪಿಐ " ನೊಂದಿಗೆ ಹೊಂದಾಣಿಕೆ ಮಾಡಿಕೊಂಡು "ಹಿಂದೂ ಕಥರೇ ಮೆ ಹೈ" ಎಂಬ ಮಾತನ್ನು ತೇಲಿ ಬಿಡುತ್ತಿದ್ದಾರೆ ಎಂದು ಆರೋಪಿಸಿ ಮುಂಬರುವ ದಿನಗಳಲ್ಲಿ ಅಲ್ಪಸಂಖ್ಯಾತರು ಜಾಗೃತರಾಗಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ, ಮಾತನಾಡಿದರು.
ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋಆರ್ಡಿನೇಟರ್ ವಸಂತ್ ಬೆರ್ನಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಮುಲ್ಕಿ ಬ್ಲಾಕ್ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪದ್ಮಾವತಿ ಶೆಟ್ಟಿ,ಮ.ನಾ.ಪ. ಸದಸ್ಯರಾದ ಅಶ್ರಫ್, ಲತೀಫ್, ಶಂಸುದ್ದೀನ್, ಅಲ್ಪಸಂಖ್ಯಾತ ಘಟಕದ ಎಂ. ಎ. ವಾಹಿದ್, ಪುತ್ತುಬಾವ, ನಂದ ಪಾಯಸ್, ಅಬ್ದುಲ್ ಖಾದರ್ ಅಂಗರಗುಡ್ಡೆ, ಮಯ್ಯದ್ದಿ ಪಕ್ಷಿಕೆರೆ, ಅಲ್ಪಸಂಖ್ಯಾತ ವಿಭಾಗದ ಅಧ್ಯಕ್ಷ ಟಿಎಚ್ ಮಯ್ಯದ್ದಿ, ಮಿರ್ಜಾ ಅಹಮದ್, ಧನರಾಜ ಕೋಟ್ಯಾನ್, ಉಮೇಶ್ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.
ಅಲ್ಪಸಂಖ್ಯಾತ ಘಟಕದ ಕೆ. ಸಾವುಲ್ ಹಮೀದ್ ಕದಿಕೆ ಸ್ವಾಗತಿಸಿದರು ಅಶ್ರಫ್ ನಿರೂಪಿಸಿದರು.
PublicNext
26/09/2021 07:43 pm