ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೀದಿ ಇಟಲಿ ಪ್ರವಾಸಕ್ಕೆ ಕೇಂದ್ರದ ಅಡ್ಡಗಾಲು- ಯಾಕೆ ಗೊತ್ತಾ?

ನವದೆಹಲಿ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ಇಟಲಿ ಪ್ರವಾಸಕ್ಕೆ ಕೇಂದ್ರ ಸರ್ಕಾರ ಅನುಮತಿ ನೀಡಲು ಹಿಂದೇಟು ಹಾಕಿದೆ.

ಮಮತಾ ಬ್ಯಾನರ್ಜಿ ವ್ಯಾಟಿಕನ್‌ನಲ್ಲಿ ನಡೆಯುವ ವಿಶ್ವ ಶಾಂತಿ ಸಮ್ಮೇಳನದಲ್ಲಿ ಭಾಗಿಯಾಗಲು ನಿರ್ಧರಿಸಿದ್ದರು. ಈ ಕಾರ್ಯಕ್ರಮ ಮದರ್ ಥೆರೇಸಾ ಅವರ ಆಧಾರಿತವಾಗಿದೆ. ವರದಿಗಳ ಪ್ರಕಾರ, ಕೇಂದ್ರದ ಈ ನಿರ್ಧಾರವನ್ನು ರಾಜಕೀಯವಾಗಿ ಗಮಮನಿಸಿದರೆ, ಈ ಕಾರ್ಯಕ್ರಮದಲ್ಲಿ ರಾಜ್ಯದ ಮುಖ್ಯಮಂತ್ರಿಯೊಬ್ಬರು ಭಾಗಿಯಾಗವುದು ಸೂಕ್ತವಲ್ಲ ಎನ್ನಲಾಗುತ್ತಿದೆ. ಈ ಕಾರ್ಯಕ್ರಮದಲ್ಲಿ ಜರ್ಮನ್ ಚಾನ್ಸಲರ್ ಏಂಜೆಲಾ ಮಾರ್ಕೆಲ್, ಪೋಪ್ ಫ್ರಾನ್ಸಿಸ್ ಮತ್ತು ಇಟಲಿ ಪ್ರಧಾನ ಮಂತ್ರಿ ಮಾರಿಯೋ ಡ್ರೈಗಿ ಸಹ ಭಾಗಿಯಾಗಿದ್ದಾರೆ.

ಇಟಲಿ ಪ್ರವಾಸಕ್ಕೆ ಅಡ್ಡಿ ಯಾಕೆ?

ಟಿಎಂಸಿ ವಕ್ತಾರ ದೇಬ್ಗಾಂಶು ಭಟ್ಟಾಚಾರ್ಯ ದೇವ್ ಟ್ವೀಟ್ ಮೂಲಕ ಕೇಂದ್ರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. "ಕೇಂದ್ರ ಸರ್ಕಾರ ಸಿಎಂ ಬ್ಯಾನರ್ಜಿ ಅವರ ರೋಮ್ ಪ್ರವಾಸಕ್ಕೆ ಅನುಮತಿ ನೀಡಿಲ್ಲ. ಈ ಮೊದಲು ಚೀನಾಗೆ ತೆರಳಲು ಅನುಮತಿ ನೀಡಲಿಲ್ಲ. ನಾವು ಅಂತರರಾಷ್ಟ್ರೀಯ ಸಂಬಂಧ ಮತ್ತು ಭಾರತದ ಹಿತವನ್ನು ಗಮನದಲ್ಲಿಟ್ಟುಕೊಂಡು ಎಲ್ಲ ನಿರ್ಧಾರಗಳನ್ನು ಒಪ್ಪಿಕೊಳ್ಳುತ್ತಾ ಬಂದಿದ್ದೇವೆ. ಈಗ ಇಟಲಿ ಪ್ರವಾಸಕ್ಕೆ ಪ್ರಧಾನಿ ಮೋದಿ ತಡೆ ನೀಡಿದ್ದು ಯಾಕೆ ಎಂದು ಅರ್ಥವಾಗುತ್ತಿಲ್ಲ? ಬಂಗಾಳದ ಜೊತೆ ನಿಮಗಿರುವ ಸಮಸ್ಯೆಯಾದರು ಏನು" ಎಂದು ಪ್ರಶ್ನಿಸಿದ್ದಾರೆ.

ಕಮ್ಯೂನಿಟಿ ಆಫ್ ಸೇಂಟ್ ಏಗಿಡಿಯೋದ ಅಧ್ಯಕ್ಷ ಪ್ರೊಫೆಸರ್ ಮಾರ್ಕೋ ಇಂಪಾಗ್ಲಿಯಾಜೋ ಅಕ್ಟೋಬರ್ 6 ಮತ್ತು 7ರಂದು ನಡೆಯುವ ಕಾರ್ಯಕ್ರಮಕ್ಕೆ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಆಹ್ವಾನ ನೀಡಿದ್ದರು. ಆಮಂತ್ರಣ ಪತ್ರಿಕೆಯಲ್ಲಿ ಟಿಎಂಸಿ ಪ್ರಮುಖರೆಲ್ಲರಿಗೂ ವಿಧಾನಸಭೆ ಚುನಾವಣೆಯ ಗೆಲುವಿಗೆ ಶುಭಾಶಯ ಸಹ ತಿಳಿಸಲಾಗಿತ್ತು. ಇನ್ನೂ ಇದೇ ಪತ್ರದಲ್ಲಿ ಮಮತಾ ಬ್ಯಾನರ್ಜಿಯವರು ಕಳೆದ 10 ವರ್ಷಗಳ ಸಮಾಜ ಸೇವೆ, ದೇಶದ ಅಭಿವೃದ್ಧಿ ಮತ್ತು ಶಾಂತಿ ರಕ್ಷಣೆ ಕುರಿತ ಕಾರ್ಯವೈಖರಿಗೂ ಅಭಿನಂದನೆ ಸಲ್ಲಿಸಲಾಗಿತ್ತು.

Edited By : Vijay Kumar
PublicNext

PublicNext

26/09/2021 08:12 am

Cinque Terre

63.1 K

Cinque Terre

3

ಸಂಬಂಧಿತ ಸುದ್ದಿ