ಉಡುಪಿ: ರಾಷ್ಟ್ರೀಯ ಶಿಕ್ಷಣ ನೀತಿಗೆ ಕಾಂಗ್ರೆಸ್ ವಿರೋಧ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಉನ್ನತ ಶಿಕ್ಷಣ ಮತ್ತು ಐಟಿ-ಬಿಟಿ ಸಚಿವ ಡಾ. ಅಶ್ವತ್ಥನಾರಾಯಣ, ರಾಷ್ಟ್ರೀಯ ಶಿಕ್ಷಣ ನೀತಿ ತಡೆಯಲು ನಿಮ್ಮ ಕನಸು-ಮನಸಿನಲ್ಲೂ ಸಾಧ್ಯವಿಲ್ಲ.ಇದು ಜನರಿಗೋಸ್ಕರ ಮಾಡಿರುವ ಶಿಕ್ಷಣ ನೀತಿ.
ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ರಾಜಕೀಯ ಮಾಡಬೇಡಿ ಎಂದು ಹೇಳಿದ್ದಾರೆ. ಈ ನೀತಿಯಲ್ಲಿ ಏನು ನ್ಯೂನತೆ ಇದೆ ಹೇಳಿ.ನೀವು ಶಿಕ್ಷಣತಜ್ಞ, ಶಿಕ್ಷಣ ಸಂಸ್ಥೆಯ ಮಾಲಕರು ಅಂತೀರಿ. ಎಲ್ಲಾ ಬರೀ ಬುರುಡೆ! ಒಳ್ಳೇದು ಮಾಡೋಕು ಗೊತ್ತಿಲ್ಲ, ಮಾಡೋದಕ್ಕೂ ಬಿಡಲ್ಲ. ಬಿಜೆಪಿ ಹತ್ತಿರ ಇದೆಲ್ಲಾ ನಡೆಯಲ್ಲ. ಜನ ನಮಗೆ ಕೆಲಸ ಮಾಡುವ ಅಧಿಕಾರ ಕೊಟ್ಟಿದ್ದಾರೆ.
ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ ಯಾಗುತ್ತದೆ ಎಂದು ಹೇಳಿದರು.
ಸೋಮವಾರ ಭಾರತ್ ಬಂದ್ ವಿಚಾರವಾಗಿ ಮಾತನಾಡಿದ ಅವರು, ಪಂಜಾಬಿಗರು ನಡೆಸುತ್ತಿರುವ ಹೋರಾಟದಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗುತ್ತಿದೆ. ಜನಪರವಾದ ಕಾಳಜಿ ಇಲ್ಲದ ವ್ಯಾಪಾರಿಗಳು ಹೋರಾಟ ಮಾಡುತ್ತಿದ್ದಾರೆ. ಕೃಷಿ ಬಿಲ್ ಸರಕಾರ ಮಾಡಿರುವ ದೊಡ್ಡ ಸುಧಾರಣೆ.ರೈತರು, ವ್ಯಾಪಾರಿಗಳ ಕೈಯಲ್ಲಿ ಸಿಲುಕಿಕೊಂಡು ಕಷ್ಟಪಡುತ್ತಿದ್ದರು.
ಇದರಿಂದ ರೈತರಿಗೆ ಸ್ವಾತಂತ್ರ ಸಿಕ್ಕಂತಾಗಿದೆ.ರೈತರಿಗೆ ಉತ್ತಮವಾದ ಮಾರುಕಟ್ಟೆ ಸಿಗಲಿದೆ. ರೈತರು ಸರಕಾರದ ಸಬ್ಸಿಡಿ- ಸಹಾಯ ಬೇಡ, ಬೆಳೆಗೆ ಬೆಲೆ ಕೊಡಿ ಅಂತಾರೆ. ಕಾಂಗ್ರೆಸ್ನ 73 ವರ್ಷಗಳ ಹಳೆಯ ಸುಧಾರಣೆಗಳನ್ನು ಜನ ನೋಡಿದ್ದಾರೆ.ರೈತರ ಸುಧಾರಣೆ ಮಾಡದಿದ್ದರೆ ನಮಗೆ ಮತ ಬೀಳುತ್ತಾ? ರೈತರಿಗೆ ವಿರುದ್ಧವಾಗಿದ್ದರೆ ಚುನಾವಣೆಗೆ ಹೋಗಲು ಆಗುತ್ತಾ? ಯಾವುದೇ ಪ್ರತಿಭಟನೆ ನಡೆದರೆ ಅದು ರೈತ ವಿರೋಧಿ.
ಪ್ರತಿಭಟನೆ ಮಾಡುವವರು ರೈತ ವಿರೋಧಿಗಳು.ಚುನಾವಣೆಗಳು ನಮ್ಮ ಮುಂದಿರುವ ಅಗ್ನಿಪರೀಕ್ಷೆ. ನಾವು ಮಾಡಿದ ಕೆಲಸ ಸರಿಯಿಲ್ಲ ಎಂದಾದ್ರೆ ಜನ ತೀರ್ಮಾನಿಸುತ್ತಾರೆ. ಮಧ್ಯದಲ್ಲಿ ಗೊಂದಲ ನಿರ್ಮಾಣ ಮಾಡಲು ನೀವು ಯಾರು? ಎಂದು ವಿರೋಧ ಪಕ್ಷಗಳ ವಿರುದ್ಧ ಹರಿಹಾಯ್ದಿದ್ದಾರೆ.
PublicNext
25/09/2021 09:55 pm