ನವದೆಹಲಿ: ಉತ್ತರ ಪ್ರದೇಶದಲ್ಲಿ ಹಿಂದುತ್ವದ ಕತ್ತು ಹಿಸುಕಲಾಗುತ್ತಿದೆ. ಅಖಿಲ ಭಾರತ ಅಖಾಡ ಪರಿಷತ್‌ನ ಅಧ್ಯಕ್ಷ ಮಹಂತ ನರೇಂದ್ರಗಿರಿ ಸ್ವಾಮೀಜಿಯವರ ನಿಗೂಢ ಸಾವು ಇದಕ್ಕೆ ನಿದರ್ಶನ ಎಂದು ಶೀವಸೇನಾ ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮಹಾಂತಗಿರಿ ಸಾವಿನ ಕುರಿತು ಮಾತನಾಡಿದ ರಾವುತ್ ‘ಉತ್ತರ ಪ್ರದೇಶದ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ‘ಮಹಂತ ಸ್ವಾಮೀಜಿ ಅವರ ಸಾವು ಆತ್ಮಹತ್ಯೆ ಎಂದು ಹೇಳುತ್ತಿದ್ದರೂ, ಇದೊಂದು ಕೊಲೆ ಎಂದು ಅವರ ಶಿಷ್ಯರು ಶಂಕಿಸಿದ್ದಾರೆ. ಹಾಗಾಗಿ ಮಹಾರಾಷ್ಟ್ರದ ಪಾಲ್ಘಾರ್‌ನಲ್ಲಿ ನಡೆದ ಸಾಧುಗಳ ಹತ್ಯೆ ಕುರಿತು ಎಂವಿಎ ಸರ್ಕಾರ ನಡೆಸಿದ ತನಿಖೆ ರೀತಿ, ಮಹಾಂತ ಅವರ ಸಾವಿನ ಕುರಿತು ಸಿಬಿಐ ತನಿಖೆಗೆ ನಡೆಸಬೇಕು‘ ಎಂದು ಸಂಜಯ್ ಒತ್ತಾಯಿಸಿದ್ದಾರೆ.
PublicNext
21/09/2021 05:52 pm