ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನನ್ನ ತಾಯಿಯನ್ನು ಬಲವಂತವಾಗಿ ಮತಾಂತರ ಮಾಡಿದ್ದಾರೆ: ಗೂಳಿಹಟ್ಟಿ ಶೇಖರ್

ಬೆಂಗಳೂರು: ನನ್ನ ತಾಯಿಯನ್ನೇ ಕ್ರೈಸ್ತ ಮಿಶಿನರಿಗಳು ಮತಾಂತರ ಮಾಡಿದ್ದಾರೆ ಎಂದು ಶಾಸಕ ಗೂಳಿಹಟ್ಟಿ ಶೇಖರ್ ಕಲಾಪದ ಶೂನ್ಯವೇಳೆಯಲ್ಲಿ ಹೇಳುವುದರ ಮೂಲಕ ರಾಜ್ಯದಲ್ಲಿ ಹರಡಿರುವ ಮತಾಂತರ ಪಿಡುಗಿನ ಬಗ್ಗೆ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಸದನದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಇದೇ ವೇಳೆ ಅವರು ಸದನದಲ್ಲಿ ನನ್ನ ತಾಯಿಯನ್ನು ಕ್ರಿಶ್ಚಿಯನ್ ಮತಾಂತರ ಮಾಡಲಾಗಿದ್ದು, ಅವರನ್ನು ಚರ್ಚ್‍ಗಳಲ್ಲಿ ಬ್ರೈನ್ ವಾಶ್ ಮಾಡುತ್ತಿದ್ದಾರೆ. ನನ್ನ ತಾಯಿ ಕ್ರಿಶ್ಚಿಯನ್ ರಿಂಗ್ ಟೋನ್ ಹಾಕಿಕೊಂಡಿದ್ದು, ಇದಲ್ಲದೇ ಕ್ರಿಶ್ಚಿಯನ್ ಫೋಟೋ ಇಟ್ಟುಕೊಂಡಿದ್ದಾರೆ. ಈ ಬಗ್ಗೆ ನಾವು ಕೇಳಿದರೆ ಸೂಸೈಡ್ ಮಾಡಿಕೊಳ್ಳುತ್ತೇನೆ ಅಂತಾ ಹೇಳುತ್ತಾರೆ ಅಂಥ ಬೇಸರ ವ್ಯಕ್ತಪಡಿಸಿದರು. ಎಲ್ಲ ಕಡೆ ಮತಾಂತರ ಜಾಸ್ತಿ ಆಗುತ್ತಿದೆ ಅಂತ ಬೇಸರ ವ್ಯಕ್ತಪಡಿಸಿದ, ಶಾಸಕ ಕೆ.ಜಿ.ಬೋಪಯ್ಯ ಉತ್ತರ ಪ್ರದೇಶದ ರೀತಿ ಕಾನೂನು ತರಬೇಕಿದೆ ಅಂತ ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.

Edited By : Nagaraj Tulugeri
PublicNext

PublicNext

21/09/2021 04:37 pm

Cinque Terre

115.51 K

Cinque Terre

23

ಸಂಬಂಧಿತ ಸುದ್ದಿ