ಲಕ್ನೋ: ಪಂಜಾಬ್‌ನಲ್ಲಿ ಚುನಾವಣಾ ತಂತ್ರ ಹೆಣೆಯಲು ಕಾಂಗ್ರೆಸ್ ಪಕ್ಷ ಸಿಖ್ ದಲಿತ ಸಮುದಾಯದ ಚರಂಜಿತ್ ಸಿಂಗ್ ಅವರನ್ನು ಸಿಎಂ ಮಾಡಿದೆ. ಕಾಂಗ್ರೆಸ್ ಪಕ್ಷದ ಈ ನಡೆ ಬಗ್ಗೆ ಪಂಜಾಬ್ ದಲಿತರು ಎಚ್ಚರದಿಂದಿರಬೇಕು ಎಂದು ಉ.ಪ್ರ ಮಾಜಿ ಸಿಎಂ ಹಾಗೂ ಬಹುಜನ ಸಮಾಜ ಪಕ್ಷದ ನಾಯಕಿ ಮಾಯಾವತಿ ಹೇಳಿದ್ದಾರೆ.
ಪಂಜಾಬ್‌ನಲ್ಲಿ ಕಾಂಗ್ರೆಸ್ ಪಕ್ಷ ಮುಂಬರಲಿರುವ ವಿಧಾನಸಭಾ ಚುನಾವಣೆಯನ್ನು ಚನ್ನಿ ನೇತೃತ್ವದಲ್ಲಿ ಎದುರಿಸುವುದಿಲ್ಲ. ಬದಲಾಗಿ, ದಲಿತೇತರರ ನಾಯಕತ್ವದಲ್ಲಿ ಎದುರಿಸಲಿದೆ. ಕಾಂಗ್ರೆಸ್ ಪಕ್ಷಕ್ಕೆ ಈಗಲೂ ದಲಿತ ಸಮುದಾಯವರ ಮೇಲೆ ನಂಬಿಕೆ ಇಲ್ಲ. ಹೀಗಾಗಿ, ಅದರ ದ್ವಿಮುಖ ನೀತಿಯ ಬಗ್ಗೆ ಹುಷಾರಾಗಿರಬೇಕು. ಪಂಜಾಬ್ ಇರಲಿ, ಉತ್ತರಪ್ರದೇಶ ಇರಲಿ ಅಥವಾ ಬೇರಾವುದೇ ರಾಜ್ಯವಿರಲಿ, ಜಾತಿವಾದಿ ಪಕ್ಷಗಳು ದಲಿತರಿಗೆ, ಹಿಂದುಳಿದವರಿಗೆ ಏನೇ ಸ್ಥಾನ ನೀಡುತ್ತಿವೆ ಎಂದರೂ ಅದು ಸ್ವಾರ್ಥಕ್ಕಾಗಿಯೇ ಹೊರತು ದಲಿತರ ಏಳಿಗೆಗಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
PublicNext
21/09/2021 03:24 pm