ಚಂಡೀಗಡ: ಚರಣ್‌ಜಿತ್ ಸಿಂಗ್ ಚನ್ನಿ ಪಂಜಾಬ್ ಮುಖ್ಯಮಂತ್ರಿಯಾದ ಬೆನ್ನಲ್ಲೇ ಹೊಸ ತಲೆನೋವು ಶುರುವಾಗಿದೆ. ಪಟ್ಟಕ್ಕೇರುತ್ತಿದ್ದಂತೆ ಕೂಡಲೇ ಅವರ ರಾಜೀನಾಮೆ ಪಡೆಯುವಂತೆ ರಾಷ್ಟ್ರೀಯ ಮಹಿಳಾ ಆಯೋಗದ ಅಧ್ಯಕ್ಷೆ ರೇಖಾ ಶರ್ಮಾ ಆಗ್ರಹಿಸಿದ್ದಾರೆ.
ಸೋಮವಾರ ಮಾಧ್ಯಮಗಳಿಗೆ ಮಾತನಾಡಿರುವ ರೇಖಾ ಶರ್ಮಾ, '2018ರಲ್ಲಿ ಚರಣ್‍ಜಿತ್ ಸಿಂಗ್ ವಿರುದ್ಧ ಕೇಳಿ ಬಂದಿದ್ದ ಮಹಿಳಾ ದೌರ್ಜನ್ಯ ಆರೋಪವನ್ನು ಉಲ್ಲೇಖಿಸಿದ್ದಾರೆ. Me Too ಅಭಿಯಾನದ ವೇಳೆ ಅವರ ಆರೋಪ ಕೇಳಿ ಬಂದಿತ್ತು. ಇಂತಹ ವ್ಯಕ್ತಿ ಸಿಎಂ ಸ್ಥಾನಕ್ಕೆ ಅರ್ಹನಲ್ಲ' ಎಂದು ಹೇಳಿದ್ದಾರೆ.
2018ರಲ್ಲಿ ನಡೆದ Me Too ಅಭಿಯಾನದಲ್ಲಿ ಚರಣ್‍ಜಿತ್ ಸಿಂಗ್ ಹೆಸರು ಕೇಳಿ ಬಂದಿತ್ತು. ಅವರ ವಿರುದ್ಧ ರಾಷ್ಟ್ರೀಯ ಮಹಿಳಾ ಆಯೋಗ ಪ್ರಕರಣ ದಾಖಲಿಸಿಕೊಂಡಿತ್ತು. ಧರಣಿ ಕೂಡ ನಡೆದಿದ್ದವು. ಇಂತಹ ವ್ಯಕ್ತಿಯನ್ನು ಮುಖ್ಯಮಂತ್ರಿಯನ್ನಾಗಿ ಮಾಡಿರುವುದು ದ್ರೋಹದ ಕೆಲಸ. ಸದ್ಯ ಮಹಿಳೆಯೋರ್ವಳು (ಸೋನಿಯಾ ಗಾಂಧಿ) ಮುಖ್ಯಸ್ಥರಾಗಿರುವ ಪಕ್ಷದಿಂದ ಆತನನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿದೆ. ಇದು ಮಹಿಳೆಯ ಸುರಕ್ಷತೆಗೆ ಅಪಾಯ. ಅವರ ವಿರುದ್ಧ ತನಿಖೆ ನಡೆಯಲೇಬೇಕು. ಅವರು ಮುಖ್ಯಮಂತ್ರಿ ಸ್ಥಾನಕ್ಕೆ ಅನರ್ಹ. ಕೂಡಲೇ ಸೋನಿಯಾ ಗಾಂಧಿ ಅವರು ಚರಣ್‍ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿಸಬೇಕು ಎಂದು ರೇಖಾ ಶರ್ಮಾ ಒತ್ತಾಯಿಸಿದ್ದಾರೆ.
PublicNext
21/09/2021 08:02 am