ಚಿತ್ರದುರ್ಗ : ಜವಾಬ್ದಾರಿಯುತ ಸಚಿವರುಗಳಿಂದಲೇ ಕೋವಿಡ್ ನಿಯಮ ಉಲ್ಲಂಘನೆ ಮಾಡಿರುವ ಘಟನೆ ಇಂದು ನಡೆಯಿತು.
ಚಳ್ಳಕೆರೆಯಲ್ಲಿ ನಡೆದಿದೆ. ನಗರದ ಬಳ್ಳಾರಿ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಿಟಿಟಿಸಿ ಕಾಲೇಜ್ ಉದ್ಘಾಟನೆಯ ಸಮಯದಲ್ಲಿ ಸರ್ಕಾರದ ಸಚಿವರುಗಳಿಗೆ ಜೆಸಿಬಿ ಮೂಲಕ ಬೃಹತ್ ಸೇಬಿನ ಹಾರವನ್ನು ಮೇಲಕ್ಕೆ ಎತ್ತಿ ಹಾಕುವ ರೀತಿಯಲ್ಲಿ ಮಾಡಲಾಯಿತು. ಸಚಿವರ ಮೇಲೆ ಹೂಮಳೆ ಸುರಿದರು. ಸಚಿವರುಗಳು ಕಾರ್ಯಕ್ರಮದ ವೇದಿಕೆ ಕಡೆಗೆ ಸಾಗುತ್ತಿದ್ದಂತೆ ಇತ್ತ ಜನರು ಸೇಬಿಗಾಗಿ ಮುಗಿ ಬಿದ್ದರು, ಮೇಲೆ ಎತ್ತಿ ಹಿಡಿದ ಸೇಬಿನ ಹಾರವನ್ನು ಹಿಡಿದು ಸೇಬು ಕಿತ್ತುಕೊಳ್ಳಲು ಮೇಲೆ ಹಾರುತ್ತಿದ್ದ ದೃಶ್ಯ ಸಮಾನ್ಯವಾಗಿತ್ತು.
ಕೊನೆಗೆ ಜೆಸಿಬಿ ಯಂತ್ರವನ್ನು ಕೆಳಗೆ ಇಳಿಸುತ್ತಿದ್ದಂತೆ ಮಕ್ಕಳು ಮಹಿಳೆಯರು, ಪುರುಷರು ಸೇಬಿಗಾಗಿ ಮುಗಿ ಬಿದ್ದರು. ಮಕ್ಕಳು ಕೆಳಗೆ ಬಿದ್ದರೂ ಕೂಡ ಬಿಡದೆ ಎಲ್ಲರೂ ಕೂಡ ಸೇಬನ್ನು ಕಿತ್ತಕೊಂಡರು. ಸರ್ಕಾರಿ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಮಾಡಿದ್ದು ಜನರಿಗೊಂದು ನ್ಯಾಯ ಜನಪ್ರತಿನಿಧಿಗಳಿಗೊಂದು ನ್ಯಾಯ ಸಾರ್ವಜನಿಕರಿಗೊಂದು ನ್ಯಾಯವೇ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ..
PublicNext
18/09/2021 09:08 pm