ಚಿತ್ರದುರ್ಗ : ಅಧಿಕಾರಿಗಳು, ಜನಪ್ರತಿನಿಧಿಗಳಿಗೆ ಮಾತ್ರವಲ್ಲದೇ, ಜನಸಾಮಾನ್ಯರಿಗೂ ಪ್ರವಾಸಿ ಮಂದಿರ ಅನುಕೂಲವಾಗಲಿದೆ ಎಂದು ಲೋಕೋಪಯೋಗಿ ಸಚಿವ ಸಿ.ಸಿ.ಪಾಟೀಲ ಹೇಳಿದರು. ನಗರದ ಪ್ರವಾಸಿ ಮಂದಿರದಲ್ಲಿ ಲೋಕೋಪಯೋಗಿ ಇಲಾಖೆ ವತಿಯಿಂದ ರೂ.25 ಕೋಟಿ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆ ವಿಭಾಗ ಕಚೇರಿ, ವಿಐಪಿ ಅತಿಥಿಗೃಹದ ಉದ್ಘಾಟನೆ ಹಾಗೂ ವಿವಿಐಪಿ ಅತಿಥಿಗೃಹ ಹಾಗೂ ಸಕ್ರ್ಯೂಟ್‍ಹೌಸ್ ಶಂಕುಸ್ಥಾಪನೆ ಮತ್ತು ರಾಷ್ಟ್ರೀಯ ಹೆದ್ದಾರಿ ವಿಭಾಗ ಕಚೇರಿ ಸ್ಥಳಾಂತರ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಪ್ರವಾಸ ಮಾಡುವ ಸಂದರ್ಭದಲ್ಲಿ ಪ್ರತಿಯೊಬ್ಬರಿಗೂ ವಿಶ್ರಾಂತಿ ಸ್ಥಳಅಗತ್ಯವಾಗಿ ಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ವತಿಯಿಂದ ರಾಷ್ಟ್ರೀಯ ಹೆದ್ದಾರಿ ಮಧ್ಯ ಮಧ್ಯದಲ್ಲಿ ವಿಶ್ರಾಂತಿಧಾಮ ನಿರ್ಮಿಸುವ ಕೆಲಸ ಮಾಡಲಾಗುತ್ತಿದೆ ಎಂದು ಹೇಳಿದರು.ಉತ್ತರ ಕರ್ನಾಟಕ ಮತ್ತು ಬಾಂಬೆ ಕರ್ನಾಟಕ ಭಾಗದವರು ರಾಜ್ಯದ ರಾಜಧಾನಿ ಬೆಂಗಳೂರಿಗೆ ಹೋಗಬೇಕಾದರೆ ಮಧ್ಯ ಕರ್ನಾಟಕದ ಚಿತ್ರದುರ್ಗದ ಮೂಲಕವೇ ಹೋಗಬೇಕು. ಮನುಷ್ಯ ಎಷ್ಟೇ ಬಲಿಶಾಲಿಯಾಗಿರಲಿ, ವಾಹನ ಎಷ್ಟೇ ಉತ್ತಮವಾಗಿದ್ದರೂ ವಿಶ್ರಾಂತಿ ಬೇಕಾಗುತ್ತದೆ. ವಿಶ್ರಾಂತಿ ಪಡೆಯಲು ಮಧ್ಯಕರ್ನಾಟಕ ಚಿತ್ರದುರ್ಗದಲ್ಲಿ ಅತಿಥಿಗೃಹ ನಿರ್ಮಾಣ ಮಾಡಿರುವುದು ಉತ್ತಮ ಕಾರ್ಯವಾಗಿದೆ ಎಂದರು.
ರಸ್ತೆ ನಿರ್ಮಾಣದಲ್ಲಿ ಇಂಜಿನಿಯರ್‍ಗಳ ಪಾತ್ರ ಬಹಳ ಮುಖ್ಯವಾಗಿದೆ. ಒಂದು ರಸ್ತೆ ನಿರ್ಮಾಣ ಮಾಡಿದರೆ ಅದು ಸುಮಾರು 20 ರಿಂದ 30 ವರ್ಷಗಳ ಕಾಲ ಧೀರ್ಘವಾಗಿ ಉಳಿಯುವಂತೆ ಇಂಜಿನಿಯರ್‍ಗಳು ನಿರ್ಮಾಣ ಮಾಡಬೇಕು. ಇಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರು ತಾವು ಪ್ರಾರಂಭ ಮಾಡುವ ಕೆಲಸದಲ್ಲಿ ಕಾನೂನಾತ್ಮಕವಾಗಿ, ಸಂವಿಧಾನತ್ಮಾಕವಾಗಿ ಬರುವ ಅಡೆತಡೆಗಳನ್ನು ಈ ಮೊದಲೇ ನಿವಾರಿಸಿಕೊಂಡು ಕಾಮಗಾರಿ ಆರಂಭಿಸಬೇಕು ಎಂದು ಸಲಹೆ ನೀಡಿದ ಅವರು, ಗುಣಮಟ್ಟದ ಕೆಲಸಗಳಿಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳಿದರು.
ಹೆಚ್‍ಎಸ್‍ಡಿಫಿ, ಅಪೆಂಡಿಕ್ಸ್-ಸಿ, ಎಸ್‍ಸಿಪಿ, ಟಿಎಸ್‍ಪಿ ಇವೆಲ್ಲವನ್ನೂ ಮಾಡಿಕೊಡಲಾಗುವುದು., ಈಗಾಗಲೇ ಎಸ್‍ಹೆಚ್‍ಡಿಫಿಗೆ ರೂ.3500 ಕೋಟಿ ರೂಪಾಯಿಗಳ ಪ್ರಸ್ತಾವನೆಗೆ ಡಿಪಿಆರ್ ತಯಾರಾದ ತಕ್ಷಣ ರಸ್ತೆಗಳಿಗೆ ಅನುದಾನ ಬಿಡುಗಡೆಮಾಡುವ ಕೆಲಸ ಮಾಡಲಾಗುವುದು ಎಂದು ಸಚಿವರು ಭರವಸೆ ನೀಡಿದರು.
PublicNext
18/09/2021 05:08 pm