ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ಸಿದ್ದರಾಮಯ್ಯ ವಿರುದ್ಧ ಮುಂದುವರಿದ ಕಟೀಲ್ ವಾಗ್ದಾಳಿ..!

ದಾವಣಗೆರೆ: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್, ಮೈಸೂರಿನಲ್ಲಿ ದೇವಸ್ಥಾನ ತೆರವು ವಿಚಾರಲ್ಲಿ ಟೀಕೆ ಮಾಡಿರುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಈಗ ಎಚ್ಚೆತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ದಾವಣಗೆರೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಣಿಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ವೇಳೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರೊಬ್ಬ ನಾಸ್ತಿಕವಾದಿ, ದೇವಸ್ಥಾನ ಧ್ವಂಸ ಮಾಡಿದ ಟಿಪ್ಪು ಜಯಂತಿ ಮಾಡಿದವರು. ವೀರಶೈವ -ಲಿಂಗಾಯತರನ್ನ ಒಡೆದವರು ಸಿದ್ರಾಮಯ್ಯ. ಅವರಿಂದ ಬಿಜೆಪಿ ಪಾಠ ಕಲಿಯುವ ಅವಶ್ಯಕತೆಯಿಲ್ಲ ಎಂದು ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

ಇನ್ನು, ದೇವಸ್ಥಾನವನ್ನ ಸಬಲೀಕರಣ ಮಾಡಲು ಬಿಜೆಪಿ ಸರ್ಕಾರವೇ ಹೆಚ್ಚು ಅನುದಾನ ನೀಡಿದೆ. ಬಿಜೆಪಿ ಸರ್ಕಾರ ದೇವಸ್ಥಾನಗಳಿಗೆ ಸ್ವಾಯತ್ತತೆ ನೀಡಿದ್ದು, ಒಂದು ತಪ್ಪಿನಿಂದ ಹಿಂದೂ ವಿರೋಧಿ ಎಂದು ಹೇಳಲಾಗುವುದಿಲ್ಲ. ಮುಂದೆ ದೇವಸ್ಥಾನಗಳನ್ನ ಒಡೆಯಲು ಅವಕಾಶ ನೀಡುವುದಿಲ್ಲ ಎಂಬ ಭರವಸೆಯನ್ನ ಮುಖ್ಯಮಂತ್ರಿಗಳೇ ನೀಡಿದ್ದು, ಮುಂದೆ ಯಾವುದೇ ದೇವಸ್ಥಾನ ಒಡೆಯುವ ತೀರ್ಮಾನಗಳನ್ನ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.

ಇನ್ನು, ದಾವಣಗೆರೆಯಲ್ಲಿ ಎರಡು ದಿನಗಳ ಕಾಲ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಲಿದೆ. ಸಭೆಯಲ್ಲಿ ಮುಂಬರುವ ತಾಲೂಕು ಪಂಚಾಯಿತಿ ಹಾಗೂ ಜಿಲ್ಲಾ ಪಂಚಾಯಿತಿ ಹಾಗೂ ವಿಧಾನಸಭೆ ಉಪಚುನಾವಣೆ ಬಗ್ಗೆ ಸುದೀರ್ಘ ಚರ್ಚೆ ನಡೆಸಲಿದ್ದು, ಪಕ್ಷ ಸಂಘಟನೆ, ಸರ್ಕಾರದ ಯೋಜನೆಗಳ ಬಗ್ಗೆ ಚರ್ಚಿಸುವುದಾಗಿ ನಳಿನಕುಮಾರ್ ಕಟೀಲು ಹೇಳಿದ್ದಾರೆ.

Edited By : Shivu K
PublicNext

PublicNext

18/09/2021 03:26 pm

Cinque Terre

80.23 K

Cinque Terre

4

ಸಂಬಂಧಿತ ಸುದ್ದಿ