ಬೆಂಗಳೂರು: ಜೆಡಿಎಸ್ ಶಾಸಕ ಎಚ್.ಡಿ. ರೇವಣ್ಣ ಅವರು ಸಚಿವ ಜೆ.ಸಿ. ಮಾಧುಸ್ವಾಮಿ ಅವರನ್ನು ಇಂದು ಹಾಡಿ ಹೊಗಳಿದ್ದಾರೆ.
ವಿಧಾನಸಭೆಯಲ್ಲಿ 2021ನೇ ಸಾಲಿನ ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ (ತಿದ್ದುಪಡಿ) ವಿಧೇಯಕದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂದರ್ಭದಲ್ಲಿ ತಿದ್ದುಪಡಿಗೆ ಎಚ್.ಡಿ.ರೇವಣ್ಣ ವಿರೋಧ ವ್ಯಕ್ತಪಡಿಸಿದರು. 'ಜೆಸಿ ಮಾಧುಸ್ವಾಮಿ ಕಾನೂನಿನ ರೀತಿಯಾಗಿ ನಡೆಯುತ್ತಾರೆ. ಈ ತಿದ್ದುಪಡಿ ಸರಿ ಇದೆಯಾ?' ಎಂದು ಮಾಧುಸ್ವಾಮಿ ಹೇಳಲಿ ಎಂದ ಎಚ್.ಡಿ. ರೇವಣ್ಣ, ಈ ವಿಧೇಯಕ ಜಾರಿಗೆ ತರಲು ಮಾಧುಸ್ವಾಮಿ ಅವರಿಗೆ ಎಲ್ಲಿಂದ ಒತ್ತಡ ಬಂತು ಎಂದು ಇಲ್ಲಿ ಹೇಳಲು ಸಾಧ್ಯವಿಲ್ಲ. ಹೇಳಿದರೆ ಅವರಿಗೆ ಕುತ್ತಾಗುತ್ತೆ' ಎಂದರು.
ಈ ವೇಳೆ ರಮೇಶ್ ಕುಮಾರ್ ಮಧ್ಯ ಪ್ರವೇಶ ಮಾಡಿ, ನೀವು ಏನು ದೊಡ್ಡ ಉಪಕಾರ ಮಾಡುತ್ತಿದ್ದೀರಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರಿಗೆ? ಅವರಿಗೆ ಇನ್ನೇನು ಕುತ್ತಾಗಬೇಕು ಏನು ಬಾಕಿ ಇದೆ ಹೇಳಿ. ನಿಮಗೆ ಯಡಿಯೂರಪ್ಪ, ಮಾಧುಸ್ವಾಮಿ ತೊಂದರೆ ಮಾಡಿಲ್ಲ. ಹಾಗಾದರೆ ನಿಮಗೆ ಅಭಿಮಾನ ಇಲ್ಲದಿರುವುದು ಯಾರ ಬಗ್ಗೆ? ಹೇಳಿ ಎಂದು ಕಾಲೆಳೆದರು.
PublicNext
16/09/2021 09:37 pm