ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸುಬ್ರಮಣಿಯನ್ ಸ್ವಾಮಿ ಒಬ್ಬ ಜೀನಿಯಸ್, ಸ್ವಪಕ್ಷವನ್ನೇ ಟೀಕಿಸುತ್ತಾರೆ: ಬೊಮ್ಮಾಯಿ

ಬೆಂಗಳೂರು: ಸುಬ್ರಮಣಿಯನ್ ಸ್ವಾಮಿ ಅವರು ಒಬ್ಬ ಫ್ರೀಲ್ಯಾನ್ಸ್ ರಾಜಕಾರಣಿ. ಅವರು ಯಾವ ಪಕ್ಷದಲ್ಲಿರುತ್ತಾರೋ ಅದೇ ಪಕ್ಷದ ನಡೆಯನ್ನು ಹೆಚ್ಚು ಟೀಕಿಸುತ್ತಾರೆ. ಆದರೆ ಅವರು ಒಬ್ಬ ಆರ್ಥಿಕ ತಜ್ಞರಾಗಿ ಜೀನಿಯಸ್ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಬೆಲೆ ಏರಿಕೆ ಕುರಿತ ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು, ಕೆಲವು ತಿಂಗಳುಗಳ ಹಿಂದೆ ಪೆಟ್ರೋಲ್ ಮತ್ತು ಡೀಸೆಲ್‌ ದರ ಏರಿಕೆ ಕುರಿತು ಸುಬ್ರಮಣಿಯನ್‌ ಸ್ವಾಮಿ ಮಾಡಿದ್ದ ಟ್ವೀಟ್‌ ಉಲ್ಲೇಖಿಸಿದ್ದಾರೆ. ‘ಪೆಟ್ರೋಲ್‌ ಬೆಲೆ ರಾಮನ ಭಾರತದಲ್ಲಿ ₹93, ಸೀತೆಯ ನೇಪಾಳದಲ್ಲಿ ₹51, ರಾವಣನ ಶ್ರೀಲಂಕಾದಲ್ಲಿ ₹51’ ಎಂದು ಟ್ವೀಟ್‌ ಮಾಡಿದ್ದು ನಿಮ್ಮ ಪಕ್ಷದವರೇ ಆದ ಸುಬ್ರಮಣಿಯನ್‌ ಸ್ವಾಮಿ. ಇದಕ್ಕೆ ಏನು ಹೇಳುತ್ತೀರಿ’ ಎಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯನ್ನು ಕುಟುಕಿದರು.

ಇದಕ್ಕೆ ಉತ್ತರಿಸಿದ ಸಿಎಂ ಬೊಮ್ಮಾಯಿ, ಸುಬ್ರಮಣಿಯನ್ ಸ್ವಾಮಿ ಅವರು ಹಿಂದಿನಿಂದಲೂ ಸ್ವಪಕ್ಷವನ್ನೇ ಟೀಕಿಸಿಕೊಂಡು ಬಂದಿದ್ದಾರೆ. ಜನತಾ ಪಕ್ಷ, ಜನತಾದಳದಲ್ಲಿ ಇದ್ದಾಗ ಆ ಪಕ್ಷಗಳನ್ನೇ ಟೀಕಿಸಿದ್ದರು. ಪ್ರಧಾನಿ ಚಂದ್ರಶೇಖರ್‌ ಅವರ ಮಂತ್ರಿ ಮಂಡಲದಲ್ಲಿ ಇದ್ದಾಗ ಪ್ರಧಾನಿಯನ್ನೇ ಟೀಕಿಸಿದ್ದರು. ಅವರು ಈ ವಿಚಾರದಲ್ಲಿ ಹಿಂಜರಿಯುವುದಿಲ್ಲ ಎಂದರು.

Edited By : Nagaraj Tulugeri
PublicNext

PublicNext

16/09/2021 07:52 am

Cinque Terre

53.61 K

Cinque Terre

4