ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರೀಕ್ಷಾ ಭಯದಿಂದ ವಿದ್ಯಾರ್ಥಿ ಸುಸೈಡ್: ತಮಿಳುನಾಡಿನಲ್ಲಿ ವಿದ್ಯಾರ್ಥಿಗಳಿಗೆ ನೀಟ್‌ನಿಂದ ಮುಕ್ತಿ

ಚೆನ್ನೈ: NEET ಪರೀಕ್ಷೆಯ ಭಯದಿಂದ ಭಾನುವಾರ ತಮಿಳುನಾಡಿನಲ್ಲಿ ವಿದ್ಯಾರ್ಥಿಯೋರ್ವ ಆತ್ಮಹತ್ಯೆ ಮಾಡಿಕೊಂಡಿದ್ದ. ಈ ಘಟನೆ ಬಳಿಕ ತಮಿಳು ನಾಡಿನಲ್ಲಿ 12 ತರಗತಿ ಅಂಕ ಆಧರಿಸಿ ವೈದ್ಯಕೀಯ ಕೋರ್ಸ್ ಗಳಿಗೆ ಪ್ರವೇಶ ಪಡೆಯಬಹುದು ಎಂದು ಮಸೂದೆ ಮಂಡಿಸಲಾಗಿದೆ.

ತಮಿಳು ನಾಡು ಸಿಎಂ ಎಂ.ಕೆ ಸ್ಟಾಲಿನ್ ಈ ಮಸೂದೆಯನ್ನು ಮಂಡಿಸಿದ್ದಾರೆ. ಈ ಮಸೂದೆಗೆ ಎಐಎಡಿಎಂಕೆ ಬೆಂಬಲ ಸೂಚಿಸಿದೆ. ಬಿಜೆಪಿ ಇದಕ್ಕೆ ವಿರೋಧ ವ್ಯಕ್ತಪಡಿಸಿದೆ. ಗದ್ದಲದ ನಡುವೆ ಅಧಿವೇಶನದಲ್ಲಿ ಬಿಲ್ ಪಾಸ್ ಮಾಡಲಾಗಿದೆ. ಇದಕ್ಕೂ ಮುನ್ನ ತಮಿಳು ನಾಡಿನಲ್ಲಿ ನೀಟ್ ಪರೀಕ್ಷೆ ರದ್ದು ಮಾಡೋದಾಗಿ ಡಿಎಂಕೆ ಭರವಸೆ ನೀಡಿತ್ತು.

Edited By : Nagaraj Tulugeri
PublicNext

PublicNext

14/09/2021 10:04 am

Cinque Terre

88.68 K

Cinque Terre

4

ಸಂಬಂಧಿತ ಸುದ್ದಿ