ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೇಶದಲ್ಲಿ ಕಾಂಗ್ರೆಸ್ ಭಯೋತ್ಪಾದನೆಯ ತಾಯಿ: ಸಿಎಂ ಯೋಗಿ ಹೇಳಿಕೆಗೆ 'ಕೈ' ಕೆಂಡಾಮಂಡಲ!

ಲಕ್ನೋ: ದೇಶದಲ್ಲಿ ಭಯೋತ್ಪಾದನೆಗೆ ತಾಯಿ ಕಾಂಗ್ರೆಸ್ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಗಂಭೀರ ಆರೋಪ ಮಾಡಿದ್ದಾರೆ. ಸಿಎಂ ಯೋಗಿ ಹೇಳಿಕೆಗೆ ಕೆಂಡಾಮಂಡಲವಾಗಿದೆ.

ಕುಶಿನಗರದಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಸಿಎಂ ಯೋಗಿ, "ಕಾಂಗ್ರೆಸ್ ದೇಶವನ್ನು ಒಡೆಯಲು ಯತ್ನಿಸಿದವರಿಗೆ ರಾಜಾತಿಥ್ಯ ನೀಡಿದೆ. ದೇಶದಲ್ಲಿನ ಭಯೋತ್ಪಾದನೆ ಚಟುವಟಿಕೆಯಲ್ಲಿ ತೊಡಗಿದವರನ್ನು ಸಾಕಿ ಸಲಹಿದೆ. ಹೀಗಾಗಿ ಕಾಂಗ್ರೆಸ್ ಭಾರತದಲ್ಲಿನ ಭಯೋತ್ಪಾದನೆ ತಾಯಿ" ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಕಾಂಗ್ರೆಸ್ ದೇಶದ ಜನರ ನಂಬಿಕೆಗೆ ದ್ರೋಹ ಮಾಡಿದೆ. ಹೀಗಾಗಿ ನಂಬಿಕೆಯನ್ನು ನೋಯಿಸುವ ಜನರನ್ನು ಸಹಿಸುವ ಅಗತ್ಯವಿಲ್ಲ. ಶ್ರೀರಾಮನನ್ನು ಅವಮಾನಿ, ಮಾಫಿಯಾಗೆ ಆಶ್ರಯ ನೀಡಿದೆ. ಆದರೆ ಬಿಜೆಪಿ ನಾಗರೀಕರ ರಕ್ಷಣೆ, ಅವರ ನಂಬಿಕೆ ಹಾಗೂ ಅವರಿಗೆ ಬೇಕಾದ ಮೂಲಭೂತ ಸೌಕರ್ಯ ನೀಡುತ್ತಿದೆ. ಬಿಜೆಪಿ ಶ್ರೀರಾಮ ಮಂದಿರ ನಿರ್ಮಾಣ ಮಾಡುತ್ತಿದೆ. ಬಿಜೆಪಿ ಎಲ್ಲರನ್ನೂ ಗೌರವಿಸುತ್ತದೆ, ಎಲ್ಲಾ ವರ್ಗಕ್ಕೂ ನ್ಯಾಯ ಒದಗಿಸುತ್ತದೆ ಎಂದು ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸಿದರು.

Edited By : Vijay Kumar
PublicNext

PublicNext

13/09/2021 08:19 pm

Cinque Terre

234.42 K

Cinque Terre

170

ಸಂಬಂಧಿತ ಸುದ್ದಿ