ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ ಆಡಳಿತಕ್ಕೆ 7 ವರ್ಷ, ಸಿಎಂ ಯೋಗಿ 4 ವರ್ಷ: ಒಂದೇ ಒಂದೂ ರಜೆ ಪಡೆಯದ ನಾಯಕರು.!

ಲಕ್ನೋ: ಸಾಮಾನ್ಯವಾಗಿ, ದುಡಿದು ಸಂಪಾದಿಸುವ ವ್ಯಕ್ತಿ ತನ್ನ ವೃತ್ತಿಜೀವನದಲ್ಲಿ ರಜೆಯನ್ನು ತೆಗೆದುಕೊಳ್ಳುತ್ತಾರೆ. ಆದರೆ ಪ್ರಧಾನಿ ನರೇಂದ್ರ ಮೋದಿ 7 ವರ್ಷಗಳಲ್ಲಿ ಒಂದೇ ಒಂದು ರಜೆಯನ್ನು ತೆಗೆದುಕೊಂಡಿಲ್ಲ. ಇತ್ತ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಈ ವಿಷಯದಲ್ಲಿ ಹಿಂದುಳಿಯುವುದಿಲ್ಲ. ಅವರು ಕಳೆದ ನಾಲ್ಕೂವರೆ ವರ್ಷಗಳಲ್ಲಿ ಯಾವುದೇ ರಜೆ ತೆಗೆದುಕೊಂಡಿಲ್ಲ.

ಗ್ರೇಟರ್ ನೋಯ್ಡಾದಲ್ಲಿ ಭಾನುವಾರ ನಡೆದ ಪ್ರಬುದ್ಧ ಸಮ್ಮೇಳನದಲ್ಲಿ ಉತ್ತರ ಪ್ರದೇಶದ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. 'ಸಿಎಂ ಯೋಗಿ ಆದಿತ್ಯನಾಥ್ ತಮ್ಮ ಎಲ್ಲ ಸಮಯವನ್ನು ಸಾರ್ವಜನಿಕರ ಸೇವೆಯಲ್ಲಿ ಕಳೆದಿದ್ದಾರೆ. ತಮಗಾಗಿ ಅಲ್ಲ ಸಮಾಜಕ್ಕಾಗಿ ಮತ್ತು ದೇಶಕ್ಕಾಗಿ ಕೆಲಸ ಮಾಡುವವನೇ ನಿಜವಾದ ದೇಶಭಕ್ತ. ಅಂತಹ ವ್ಯಕ್ತಿ ಮಾತ್ರ ದೇಶ ಮತ್ತು ಸಮಾಜದಲ್ಲಿ ಬದಲಾವಣೆ ತರಲು ಸಾಧ್ಯ' ಎಂದು ದಿನೇಶ್ ಶರ್ಮಾ ತಿಳಿಸಿದ್ದಾರೆ.

ಉತ್ತರ ಪ್ರದೇಶದಲ್ಲಿ ಒಂದೇ ಒಂದು ಹಿಂದೂ-ಮುಸ್ಲಿಂ ಗಲಭೆ ನಡೆದಿಲ್ಲ. ಏಕೆಂದರೆ ಬಿಜೆಪಿ ಯಾರ ವಿರುದ್ಧವೂ ತಾರತಮ್ಯ ಮಾಡುವುದಿಲ್ಲ. ಬಿಜೆಪಿ ಸಮಾಜದ ಪ್ರತಿಯೊಂದು ವಿಭಾಗವನ್ನು ಜೊತೆಯಲ್ಲಿ ಕೊಂಡೊಯ್ಯುವ ಪಕ್ಷವಾಗಿದೆ ಎಂದು ದಿನೇಶ್ ಶರ್ಮಾ ತಿಳಿಸಿದ್ದಾರೆ.

Edited By : Vijay Kumar
PublicNext

PublicNext

13/09/2021 05:22 pm

Cinque Terre

47.89 K

Cinque Terre

19

ಸಂಬಂಧಿತ ಸುದ್ದಿ