ಅಹಮದಾಬಾದ್ : ದಿಢೀರ್ ಬೆಳವಣಿಗೆವೊಂದರಲ್ಲಿ ಗುಜರಾತ್ ನ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್ ರೂಪಾಣಿ ನಿನ್ನೆ (ಶನಿವಾರ) ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಇಂದು ನೂತನ ಸಿಎಂ ಆಗಿ ಭೂಪೇಂದ್ರ ಪಟೇಲ್ ಆಯ್ಕೆಯಾಗಿದ್ದಾರೆ.
ರೂಪಾಣಿ ರಾಜೀನಾಮೆ ಬೆನ್ನಲ್ಲೆ ನೂತನ ಮುಖ್ಯಮಂತ್ರಿ ರೇಸ್ ನಲ್ಲಿ ಪ್ರಮುಖವಾಗಿ ಮೂರು ಜನರ ಹೆಸರುಗಳು ಮುನ್ನೆಲೆಗೆ ಬಂದಿದ್ದವು. ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ, ಗುಜರಾತ್ ಉಪಮುಖ್ಯಮಂತ್ರಿ ನಿತಿನ್ ಪಟೇಲ್ ಹಾಗೂ ಕ್ಯಾಬಿನೆಟ್ ಮಂತ್ರಿ ಆರ್.ಸಿ ಫಾಲ್ದು ಅವರ ಹೆಸರುಗಳು ಮುಖ್ಯಮಂತ್ರಿ ಸ್ಥಾನದ ರೇಸ್ ನ ಲ್ಲಿದ್ದವು.
ಇನ್ನು ಗುಜರಾತ್ ನಲ್ಲಿ 2022 ಡಿಸೆಂಬರ್ ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮತ್ತೊಂದು ಬಾರಿ ಗದ್ದುಗೆ ಏರಲು ಬಿಜೆಪಿ ಯೋಜನೆ ಹಾಕಿಕೊಂಡಿದೆ.
PublicNext
12/09/2021 04:25 pm