ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ನಮ್ಮ ತಪ್ಪಿನಿಂದ ಹು-ಧಾ ಪಾಲಿಕೆಯಲ್ಲಿ ಹಿನ್ನಡೆಯಾಗಿದೆ- ಕೆಪಿಸಿಸಿ ಅಧ್ಯಕ್ಷ ಡಿಕೆಶಿ

ಹುಬ್ಬಳ್ಳಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾವು ಸೋತಿಲ್ಲ. ನಮ್ಮ ತಪ್ಪಿನಿಂದ ಪಕ್ಷಕ್ಕೆ ಹಿನ್ನಡೆಯಾಗಿದೆ. ವಿರೋಧ ಪಕ್ಷದಲ್ಲಿ ಕುಳಿತು ನಾವು ಜವಾಬ್ದಾರಿಯುತವಾಗಿ ಕಾರ್ಯ ಮಾಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಐದು ಜನ ಬಂಡಾಯ ಅಭ್ಯರ್ಥಿಗಳು ಸ್ಥಳೀಯ ಮುಖಂಡರ ತಪ್ಪಿನಿಂದಾಗಿ ಅವರು ಗೆದ್ದಿದ್ದಾರೆ. ಅವರು ನಮ್ಮ ಪಕ್ಷಕ್ಕೆ ಸೇರ್ಪಡೆಯಾಗುವುದಾಗಿ ಈಗಾಗಲೇ ತಿಳಿಸಿದ್ದಾರೆ. ಟಿಕೆಟ್ ಹಂಚಿಕೆ ತಪ್ಪಿನಿಂದ ನಮಗೆ ಹಿನ್ನಡೆಯಾಗಿದೆ. ಮತ ನೀಡಿದ ಎಲ್ಲ ಮತಬಾಂಧವರಿಗೆ ಧನ್ಯವಾದಗಳು. ನಾನು ಎಲ್ಲ ಮತದಾರರಿಗೆ ಮಾತು ಕೊಡತ್ತಾ ಇದೇನೆ. ನಾವು ಹೇಳಿದಂತೆ ಜನರ ವಿಶ್ವಾಸ ಉಳಿಸುತ್ತೇವೆ ಎಂದರು.

ನಮ್ಮ ಪಕ್ಷ ಆಡಳಿತದಲ್ಲಿ ಇಲ್ಲ. ಆದರೇ ಹುಬ್ಬಳ್ಳಿಯಲ್ಲಿ ಹಾಲಿ ಸಿಎಂ, ಮಾಜಿ ಸಿಎಂ, ಕೆಂದ್ರದ ಮಂತ್ರಿ ಸೇರಿದಂತೆ ಅನೇಕ ನಾಯಕರು ಸ್ಥಳೀಯರೇ, ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡು ಅನುಕೂಲಕ್ಕೆ ತಕ್ಕಂತೆ ಪಾಲಿಕೆ ಚುನಾವಣೆಯನ್ನು ಮಾಡಿದರು ಸಹಿತ ಜನರು ನಮಗೆ ಸಂಖ್ಯಾಬಲ ನೀಡದೇ ಹೋದರು ಉತ್ತಮ ಫಲಿತಾಂಶವನ್ನು ನೀಡಿದ್ದಾರೆ. ನಮಗೆ ಸಿಕ್ಕ ಅವಕಾಶವನ್ನು ಸದುಪಯೋಗ ಪಡೆದುಕೊಳ್ಳುತ್ತೇವೆ. ಕಲಬುರಗಿ ಹಾಗೂ ಹು-ಧಾದಲ್ಲಿ ನಮ್ಮ ಪಕ್ಷಕ್ಕೆ ಸಮಾಧಾನ ಫಲಿತಾಂಶ ಬಂದಿದೆ. ಬೆಳಗಾವಿಯಲ್ಲಿ ಚಿಹ್ನೆ ಮೇಲೆ ಚುನಾವಣೆ ಮಾಡಿದ್ದೇವೆ. ಅಲ್ಲಿ 20 ಸ್ಥಾನದ ನಿರೀಕ್ಷೆ ಮಾಡಿದ್ದೇವು ಎಂದು ತಿಳಿಸಿದರು.

ಬಿಜೆಪಿ ನಾಯಕರೇ ಸರ್ಟಿಫಿಕೇಟ್ ಪಡೆಯಲಿ: ಹು-ಧಾ ಮಹಾನಗರ ಪಾಲಿಕೆ ಚುನಾವಣೆ ಫಲಿತಾಂಶ ಕುರಿತು ಬಿಜೆಪಿ ಸರ್ಕಾರ, ಆಡಳಿತ ಒಪ್ಪಿ ಮತದಾ‌ನ ಆಯ್ತಾ ಅಂತ ಬಿಜೆಪಿ ನಾಯಕರಾದ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರೇ ಹೇಳಬೇಕು. ಅವರ ಪಕ್ಷದ ಬಗ್ಗೆ ನಾನು ಹೇಳಲ್ಲಾ. ಮತದಾರರು ಅವರ ಆಡಳಿತ ಮೆಚ್ಚಿ ಫಲಿತಾಂಶ ನೀಡಿದ್ದಾರಾ ಎಂಬುದನ್ನು ಅವರೇ ಉತ್ತರಿಸಬೇಕು ಎಂದು ಒತ್ತಾಯಿಸಿದರು.

ಶೀಘ್ರ ಸ್ಥಳೀಯ ಸಂಸ್ಥೆ ಚುನಾವಣೆ ನಡೆಸಲು ಒತ್ತಾಯ: ರಾಜ್ಯದ ಕೆಲವು ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಬಿಜೆಪಿ ರಾಜಕಾರಣ ಮಾಡುತ್ತಿದೆ. ಎಲ್ಲ ಸ್ಥಳೀಯ ಸಂಸ್ಥೆಗಳ ಚುನಾವಣೆಗಳನ್ನು ಶೀಘ್ರದಲ್ಲೇ ನಡೆಸಬೇಕು ಎಂದರು.

ಗುಜರಾತ್ ಸಿಎಂ ಬದಲಾವಣೆ: ಗುಜರಾತ್ ಸಿಎಂ ಅವರ ಆಡಳಿತ ವೈಖರಿ ಸರಿಯಿಲ್ಲ. ಭ್ರಷ್ಟಾಚಾರ ಹೆಚ್ಚಿದೆ. ಅವರ ಆಡಳಿತದಿಂದ ಜನರು ಬೇಸತ್ತು ಹೋಗಿದ್ದಾರೆ. ಮೂರು ನಾಲ್ಕು ಜನರನ್ನು ಈಗಾಗಲೇ ಬದಲಾವಣೆ ಮಾಡಿದ್ದು, ಅಲ್ಲದೇ ಕೋವಿಡ್ ನಿರ್ವಹಣೆಯಲ್ಲಿ ವಿಫಲವಾಗಿದ್ದು ಆಡಳಿತ ಹೇಗಿದೆ ಎಂಬುದನ್ನು ತೋರಿಸುತ್ತೆ. ಹೀಗಾಗಿ ಗುಜರಾತನಲ್ಲಿ ಸಿಎಂ ಸೇರಿದಂತೆ ಕೇಂದ್ರ ಆರೋಗ್ಯ ಸಚಿವರನ್ನು ಸಹ ಬದಲಾವಣೆ ಮಾಡಿದ್ದಾರೆ ಎಂದು ತಿಳಿಸಿದರು.

Edited By : Manjunath H D
PublicNext

PublicNext

12/09/2021 01:03 pm

Cinque Terre

102.76 K

Cinque Terre

9