ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿಕ್ಕೋಡಿ: ಬಿಜೆಪಿಗೆ ಬರುವಂತೆ ಶ್ರೀಮಂತ ಪಾಟೀಲ್‌ಗೆ ಆಮಿಷ ಒಡ್ಡಿದ್ಯಾರು?; ಲಕ್ಷ್ಮಣ ಸವದಿ

ಚಿಕ್ಕೋಡಿ: ಕಾಂಗ್ರೆಸ್‌ ಬಿಟ್ಟು ಬಿಜೆಪಿ ಸೇರುವಂತೆ ಕಲಮ ಪಡೆಯ ನಾಯಕರು ಹಣದ ಆಮಿಷ ಒಡ್ಡಿದ್ದರು ಎಂಬ ಮಾಜಿ ಸಚಿವ ಶ್ರೀಮಂತ ಪಾಟೀಲ್ ಹೇಳಿಕೆ ಭಾರಿ ಚರ್ಚೆಗೆ ಕಾರಣವಾಗಿದೆ. ಆದರೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರು ಶ್ರೀಮಂತ ಪಾಟೀಲ್ ಅವರಿಗೆ ಯಾರು ಹಣ ಕೊಡಲು ಹೋಗಿದ್ದರು? ಯಾರು ಆಮಿಷ ಒಡ್ಡಿದ್ದರು? ಎಂಬುವುದನ್ನು ಪರಿಶೀಲನೆ ಮಾಡಬೇಕು ಎಂದು ಹೇಳಿದ್ದಾರೆ.

ಅಥಣಿಯಲ್ಲಿ ಭಾನುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಶ್ರೀಮಂತ ಪಾಟೀಲ ಹೇಳಿಕೆಯನ್ನು ಮಾಧ್ಯಮಗಳಲ್ಲಿ ನೋಡಿದ್ದೇನೆ. ಸದ್ಯದಲ್ಲಿ ನನಗೂ ಅವರಿಗೂ ಭೇಟಿ ಆಗಿಲ್ಲ. ಅಧಿಕಾರ ಶಾಶ್ವತವಲ್ಲ, ಇದ್ದಾಗ ಮತ್ತು ಅವಕಾಶ ಕೊಟ್ಟಾಗ ಸದ್ಬಳಕೆ ಮಾಡಿಕೊಳ್ಳಬೇಕು. ಶ್ರೀಮಂತ ಪಾಟೀಲ್ ವೈಮನಸ್ಸಿನಿಂದ ಹಾಗೆ ಹೇಳಿದ್ದಾರೆ ಅನಿಸುತ್ತಿಲ್ಲ. ಮಾತನಾಡುವ ಭರದಲ್ಲಿ ಆ ರೀತಿ ಹೇಳಿರಬಹುದು. ಈ ಬಗ್ಗೆ ಅವರನ್ನು ಖುದ್ದು ಭೇಟಿಯಾಗಿ ಮಾತನಾಡುವೆ ಎಂದರು. ‌

Edited By : Manjunath H D
PublicNext

PublicNext

12/09/2021 12:30 pm

Cinque Terre

126.89 K

Cinque Terre

8

ಸಂಬಂಧಿತ ಸುದ್ದಿ