ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೋದಿ-ಶಾ ಚುನಾವಣಾ ರಣತಂತ್ರ.!- ಯಾರಿಗೆ 'ಗುಜರಾತ್‌ ಸಿಎಂ' ಪಟ್ಟ?

ಗಾಂಧಿನಗರ: ಗುಜರಾತ್ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ಎಂಬಂತೆ ಮುಖ್ಯಮಂತ್ರಿ ಸ್ಥಾನಕ್ಕೆ ವಿಜಯ್​ ರೂಪಾನಿ ಅವರು ರಾಜೀನಾಮೆ ನೀಡಿದ್ದಾರೆ. ಮುಂದಿನ ವರ್ಷ ಪ್ರಧಾನಿ ನರೇಂದ್ರ ಮೋದಿಯ ತವರು ರಾಜ್ಯವಾದ ಗುಜರಾತ್​ನಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ರೂಪಾನಿ ಅವರ ರಾಜೀನಾಮೆ ಭಾರೀ ಚರ್ಚೆಗೆ ಗ್ರಾಸವಾಗಿದೆ.

ಪಕ್ಷದಲ್ಲಿ ಕೆಲ ಶಾಸಕರು ಸಿಎಂ ವಿಜಯ್​ ರೂಪಾನಿ ಆಡಳಿತದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು. ಆಗಸ್ಟ್​ ತಿಂಗಳಲ್ಲಿ ಕೇಂದ್ರ ಗೃಹ ಸಚಿವ ಅಮಿತ್​ ಶಾ ಗುಜರಾತ್​ ರಾಜ್ಯಕ್ಕೆ ಭೇಟಿ ನೀಡಿದ್ದಾಗ ಹಲವು ಶಾಸಕರು ಸಿಎಂ ರೂಪಾಣಿ ಕಾರ್ಯವೈಖರಿ ಬಗ್ಗೆ ದೂರು ನೀಡಿದ್ದರು. ನಿನ್ನೆ ಗಾಂಧಿನಗರಕ್ಕೆ ಬಂದಿಳಿದಿದ್ದ ಅಮಿತ್ ಶಾ ಕೋರ್ ಕಮಿಟಿ ಸಭೆ ನಡೆಸಿ ಮುಖ್ಯಮಂತ್ರಿ ಬದಲಾವಣೆ ನಿರ್ಧಾರ ಮಾಡಿದ್ದಾರೆ ಎನ್ನಲಾಗಿದೆ.

2022ರ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಮುಖ್ಯಮಂತ್ರಿ ಬದಲಾವಣೆ ಮಾಡಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಪವರ್​ಫುಲ್ ನಾಯಕನೋರ್ವನನ್ನ ಮುನ್ನೆಲೆಗೆ ತರುವ ಉದ್ದೇಶದಿಂದ ಸಿಎಂ ಬದಲಾವಣೆಯಾಗಿರಬಹುದು ಎಂಬ ಚರ್ಚೆಗಳು ನಡೆಯುತ್ತಿವೆ. ಈ ಮುಂದೆ ಮುಂದಿನ ಸಿಎಂ ಸ್ಥಾನಕ್ಕೆ ಪ್ರಮುಖವಾಗಿ ಐವರ ಹೆಸರುಗಳು ಕೇಳಿಬಂದಿವೆ.

ನಿತಿನ್​ ಪಟೇಲ್, ಮನ್ಸುಖ್​ ಮಾಂಡವಿಯಾ, ಸಿ.ಆರ್ ಪಾಟೀಲ್, ಪುರುಷೋತ್ತಮ್​ ರೂಪಾಲ್​, ಆರ್​.ಸಿ ಫಾಲ್ದು ಹೆಸರುಗಳು ಮುಂದಿನ ಸಿಎಂ ರೇಸ್​ನಲ್ಲಿ ಕೇಳಿಬಂದಿವೆ. ಅಲ್ಲದೇ ಪಾಟೀದಾರ್ ಸಮುದಾಯದ ನಾಯಕನಿಗೆ ಸಿಎಂ ಪಟ್ಟ ಕಟ್ಟುವ ಸಾಧ್ಯತೆಗಳಿವೆ ಎನ್ನಲಾಗಿದೆ.

Edited By : Vijay Kumar
PublicNext

PublicNext

11/09/2021 04:14 pm

Cinque Terre

55.92 K

Cinque Terre

4

ಸಂಬಂಧಿತ ಸುದ್ದಿ