ಶ್ರೀನಗರ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತೊಂದು ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ. ನಾನು ಕೂಡ ಕಾಶ್ಮೀರಿ ಪಂಡಿತ ನಮ್ಮದು ಕಾಶ್ಮೀರಿ ಪಂಡಿತರ ಕುಟುಂಬ ಎಂದಿದ್ದಾರೆ.
ಎರಡು ದಿನಗಳ ಜಮ್ಮುವಿಗೆ ಭೇಟಿ ನೀಡಿರುವ ಅವರು ಕಾರ್ಯಕ್ರಮದಲ್ಲಿ ಮಾತನಾಡಿ, ಇಂದು ಬೆಳಿಗ್ಗೆ ಕಾಶ್ಮೀರಿ ಪಂಡಿತರ ನಿಯೋಗವು ನನ್ನನ್ನು ಭೇಟಿ ಮಾಡಿದೆ. ಕಾಂಗ್ರೆಸ್ ಅನೇಕ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದೆ. ಆದರೆ ಬಿಜೆಪಿ ಏನೂ ಮಾಡಿಲ್ಲ ಎಂದು ಅವರು ನನಗೆ ತಿಳಿಸಿದರು ಎಂದಿದ್ದಾರೆ.
ಇಲ್ಲಿಗೆ ಬಂದ ಮೇಲೆ ನಾನು ನನ್ನ ಮನೆಗೆ ಬಂದಿದ್ದೇನೆ ಎಂದೆನಿಸುತ್ತಿದೆ. ಕಾಶ್ಮೀರದೊಂದಿಗೆ ನಮ್ಮ ಕುಟುಂಬ ಸುಧೀರ್ಘ ಸಂಬಂಧ ಹೊಂದಿದೆ. ನಾನು ಮನೆಗೆ ಬಂದಿದ್ದೇನೆ ಎಂದು ಅನಿಸುತ್ತಿದೆ. ನನ್ನ ಕುಟುಂಬವು ಜಮ್ಮು ಮತ್ತು ಕಾಶ್ಮೀರದೊಂದಿಗೆ ಸುದೀರ್ಘ ಸಂಬಂಧ ಹೊಂದಿದೆ. ಕಾಶ್ಮೀರಿ ಪಂಡಿತ ಸಹೋದರರಿಗೆ ನಾನು ಏನಾದರೂ ಮಾಡುವುದಾಗಿ ಭರವಸೆ ನೀಡಿದರು.
PublicNext
10/09/2021 09:08 pm