ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾಂಗ್ರೆಸ್ ಪಕ್ಷ ದೇಶದಲ್ಲಿ ಹಿಡಿತ ಕಳೆದುಕೊಂಡಿದೆ: ಶರದ್ ಪವಾರ್

ಮುಂಬೈ: ದೇಶದಲ್ಲಿ ಕಾಂಗ್ರೆಸ್ ಹಿಡಿತ ತಪ್ಪಿದೆ ಎಂಬುದನ್ನು ಅವರು ಒಪ್ಪಿಕೊಳ್ಳಬೇಕು. ಏಕೆಂದರೆ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಕಾಂಗ್ರೆಸ್ ತನ್ನ ಹಿಡಿತ ಕಳೆದುಕೊಂಡಿದೆ. ಎಂದು ಎನ್‌ಸಿಪಿ ನಾಯಕ ಶರದ್ ಪವಾರ್ ಹೇಳಿದ್ದಾರೆ.

"ಹಿಂದೊಂದು ಕಾಲವಿತ್ತು. ಆ ಸಂದರ್ಭದಲ್ಲಿ ಕಾಂಗ್ರೆಸ್‌ ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ತನ್ನ ಹಿಡಿತವನ್ನೇ ಹೊಂದಿತ್ತು. ಆದರೆ ಈಗ ಹಾಗೆ ಇಲ್ಲ. ಈ ವಾಸ್ತವತೆಯನ್ನು ಕಾಂಗ್ರೆಸ್‌ ಒಪ್ಪಿಕೊಳ್ಳಬೇಕು. ಈ ವಾಸ್ತವತೆಯನ್ನು ಒಪ್ಪಿಕೊಳ್ಳಲುವುದು ಅನಿವಾರ್ಯವಾಗಿದೆ," ಎಂದು ಕೂಡಾ ಎನ್‌ಸಿಪಿ ನಾಯಕ ಹೇಳಿದ್ದಾರೆ.

"ನಾಯಕತ್ವದ ವಿಚಾರಕ್ಕೆ ಬಂದಾಗ, ಕಾಂಗ್ರೆಸ್‌ನ ನನ್ನ ಸಹೋದ್ಯೋಗಿಗಳು ದೃಷ್ಟಿಕೋನವನ್ನು ಒಪ್ಪಿಕೊ‌ಳ್ಳುವ ಅಥವಾ ವಾಸ್ತವತೆಯನ್ನು ಒಪ್ಪುವ ಮನಸ್ಥಿತಿಯನ್ನು ಹೊಂದಿಲ್ಲ," ಎಂದು ಮುಂಬೈನ ಮಾಧ್ಯಮವೊಂದಕ್ಕೆ ಪ್ರತಿಕ್ರಿಯೆ ನೀಡಿದ ಶರದ್ ಪವಾರ್ ಹೇಳಿದ್ದಾರೆ. 2024 ರ ಲೋಕ ಸಭೆ ಚುನಾವಣೆಗೆ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರೋಧ ಪಕ್ಷಗಳ ಒಕ್ಕೂಟದ ನಾಯಕತ್ವ ವಹಿಸುತ್ತಾರೆ ಎಂದು ಹೇಳುವಾಗ, ಕಾಂಗ್ರೆಸ್‌ ನಾಯಕರು ಮಾತ್ರ ನಮಗೆ ನಾಯಕರಾಗಿ ರಾಹುಲ್‌ ಗಾಂಧಿ ಇದ್ದಾರೆ ಎಂದು ಹೇಳುತ್ತಾರೆ.

Edited By : Nagaraj Tulugeri
PublicNext

PublicNext

10/09/2021 04:44 pm

Cinque Terre

65.43 K

Cinque Terre

8

ಸಂಬಂಧಿತ ಸುದ್ದಿ