ಕೋಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಶುಕ್ರವಾರ ಭಾಬನಿಪುರ ವಿಧಾನಸಭಾ ಸ್ಥಾನದ ಉಪಚುನಾವಣೆಗೆ ನಾಮಪತ್ರ ಸಲ್ಲಿಸಿದರು. ಬಿಜೆಪಿಯ ಪ್ರಿಯಾಂಕಾ ಟಿಬ್ರೂವಾಲ್ ಮತ್ತು ಎಡರಂಗದ ಶ್ರೀಜೀಬ್ ಬಿವಾಸ್ ಅವರು ಮಮತಾ ವಿರುದ್ಧ ಸ್ಪರ್ಧಿಸಲಿದ್ದಾರೆ.
ಭಾರತೀಯ ಚುನಾವಣಾ ಆಯೋಗ (ಇಸಿಐ) ಘೋಷಿಸಿದ ವೇಳಾಪಟ್ಟಿಯ ಪ್ರಕಾರ, ಪಶ್ಚಿಮ ಬಂಗಾಳದ ಭಾಬಾನಿಪುರ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ಸೆಪ್ಟೆಂಬರ್ 30ರಂದು ನಡೆಯಲಿದೆ.
ಭಾಬಾನಿಪುರ ವಿಧಾನಸಭಾ ಸ್ಥಾನವನ್ನು ಪಶ್ಚಿಮ ಬಂಗಾಳದ ಕೃಷಿ ಸಚಿವ ಸೊಭಾಂದೆಬ್ ಚಟ್ಟೋಪಾಧ್ಯಾಯ ಅವರು ಮೇ ತಿಂಗಳಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ರು. ಇದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭಬಾನಿಪುರ ಸ್ಥಾನದಿಂದ ಸ್ಪರ್ಧಿಸಲು ದಾರಿ ಮಾಡಿ ಕೊಟ್ಟಿದೆ.
PublicNext
10/09/2021 04:04 pm