ಚಿತ್ರದುರ್ಗ: ಪಾಕಿಸ್ತಾನದಿಂದ ಕಾಶ್ಮೀರಕ್ಕೆ ಡ್ರಗ್ಸ್ ತರಿಸಿದ್ದು ಯಾರೂ ಆ ಜನರನ್ನು ಅಮಲಿನಲ್ಲಿಟ್ಟಿದ್ದು ಯಾರೂ ಎಂದು ಕಾಂಗ್ರೆಸ್ ಪಕ್ಷದವರು ಮೊದಲು ಹೇಳಲಿ ಎಂದು ಕೇಂದ್ರ ಸಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ನಾರಾಯಣಸ್ವಾಮಿ ಕಿಡಿ ಕಾರಿದರು.
ಚಿತ್ರದುರ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅರವತ್ತು ವರ್ಷ ಜಮ್ಮು ಕಾಶ್ಮೀರದ ಜನತೆಯನ್ನು ಅಮಲಿನಟ್ಟಿವರು ಯಾರು ಎಂದು ಕಾಂಗ್ರೆಸ್ ಪಕ್ಷದವರು ಈ ದೇಶದ ಜನರ ಮುಂದೆ ಹೇಳಲಿ ಎಂದರು. ಇನ್ನು ಹಿಂದೂ ಮಹಾ ಗಣಪತಿ ಆಚರಣೆಯನ್ನು ಸರ್ಕಾರದ ಅನುಮತಿ ಪಡೆದು ಅತ್ಯಂತ ವಿಜೃಂಭಣೆಯಿಂದ ಕೋವಿಡ್ ನಿಯಮ ಪಾಲಿಸಿಕೊಂಡು ಆಚರಣೆ ಮಾಡುತ್ತೆವೆ ಎಂದು ಸಚಿವರು ತಿಳಿಸಿದರು.
PublicNext
09/09/2021 01:43 pm