ಕೊಪ್ಪಳ: ಆರಗ ಜ್ಞಾನೇಂದ್ರ, ಸಿ.ಟಿ ರವಿ ಅವರ ಕೂದಲು ಪರೀಕ್ಷೆ ಮಾಡಬೇಕು.ಇವರಿಬ್ಬರೂ ಡ್ರಗ್ಸ್ ತೆಗೆದುಕೊಂಡವರಂತೆ ಮಾತಾಡ್ತಾರೆ. ಹೀಗಾಗಿ ಇವರಿಬ್ಬರ ಕೂದಲು ಸ್ಯಾಂಪಲ್ ಪರೀಕ್ಷೆ ಮಾಡಬೇಕು ಎಂದು ಮಾಜಿ ಸಚಿವ ಶಿವರಾಜ್ ತಂಗಡಗಿ ಹೇಳಿದ್ದಾರೆ.
ಕೊಪ್ಪಳದಲ್ಲಿ ಮಾತನಾಡಿದ ಅವರು ಬಿಜೆಪಿಯವರು ಡ್ರಗ್ಸ್ ತೆಗೆದುಕೊಳ್ತಾರೆಂಬ ಅನುಮಾನ ಇದೆ. ನಟಿ, ಆ್ಯಂಕರ್ ಅನುಶ್ರೀಯನ್ನು ಚೆಕ್ ಮಾಡುವುದಕ್ಕೂ ಮುನ್ನ, ಬಿಜೆಪಿಯವರಿಗೆ ಚೆಕ್ ಮಾಡಬೇಕೆಂದು ಶಿವರಾಜ ತಂಗಡಗಿ ಹೇಳಿದ್ದಾರೆ. ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ವಿಚಾರಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಹುಟ್ಟಿಸಿದ ಕೂಸಿಗೆ ನೀವು ಏಕೆ ಹೆಸರು ಇಡುತ್ತೀರಿ. ನೀವು ಕೂಸು ಹುಟ್ಟಿಸಿ ನಿಮ್ಮ ಹೆಸರಿಡಿ ಎಂದು ತಂಗಡಗಿ ಸಿ.ಟಿ. ರವಿ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದಾರೆ.
PublicNext
08/09/2021 05:14 pm