ಚಿತ್ರದುರ್ಗ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹಿಂಬಾಗಿಲಿನಿಂದ ಬಂದು ರಾಜಕೀಯ ಮಾಡುತ್ತಿದ್ದಾರೆ ಎಂದು ಕೇಂದ್ರ ಸಚಿವ ಎ. ನಾರಾಯಣಸ್ವಾಮಿ ಹೇಳಿದರು. ಹಿಂಬಾಗಿಲ ಮೂಲಕ ಬಿಜೆಪಿ ರಾಜಕಾರಣ ಮಾಡುತ್ತದೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ಯಾವ ಪಕ್ಷದವರು. ಅವರು ಹಿಂಬಾಗಿಲ ಮೂಲಕ ಬಂದು ರಾಜಕೀಯ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಯಾವತ್ತೂ ಕಾಂಗ್ರೆಸ್ ಹೊಗಳಿಲ್ಲ.ಕಾಂಗ್ರೆಸ್ ಗೆ ಬಂದು ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾರೆ.ಕಾಂಗ್ರೆಸ್ ಪಕ್ಷ ಕಟ್ಟಿದವರವರಿಗೆ ಸಿದ್ದರಾಮಯ್ಯ ಅವಕಾಶ ಮಾಡಿಕೊಡುತ್ತಿಲ್ಲ ಎಂದರು.
ಆಗಾಗಿ ಮತ್ತೋಬ್ಬರ ಬಗ್ಗೆ ಸಿದ್ದರಾಮಯ್ಯ ಮಾತನಾಡಬಾರದು ಎಂದು ತಿಳಿಸಿದರು. ಇನ್ನು ಮಾಜಿ ಸಿಎಂ ಯಡಿಯೂರಪ್ಪ ಅವರನ್ನ ಬಿಜೆಪಿ ಸೈಡ್ ಲೈನ್ ಮಾಡುತ್ತಿದೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿರುವ ಕೇಂದ್ರ ಸಚಿವರು ರಾಜ್ಯದಲ್ಲಿ ಯಡಿಯೂರಪ್ಪ ಅವರನ್ನ ಸೈಡ್ ಲೈನ್ ಮಾಡುವ ಶಕ್ತಿ ಯಾರಿಗೆ ಇದೆ ಎಂದರು. ನಮ್ಮ ಪಾರ್ಟಿಗಲ್ಲ, ವಿರೋಧ ಪಕ್ಷಗಳಿಗೂ ಇಲ್ಲ.
ಯಡಿಯೂರಪ್ಪ ರಾಜ್ಯದ ಜನ ನಾಯಕ, ಅವರನ್ನ ಹಿಂದಿಕ್ಕುವ ಎದೆಗಾರಿಕೆ ಯಾವುದೇ ರಾಜಕಾರಣಿಗಿಲ್ಲ ಎಂದು ತಿಳಿಸಿದರು.
ಕೃಷಿ ಸಚಿವ ಬಿಸಿ ಪಾಟೀಲ್ ವಿರುದ್ದ ಕೇಳಿ ಬಂದ ಕಿಕ್ ಬ್ಯಾಕ್ ಆರೋಪ ವಿಚಾರ ಬಗ್ಗೆ ಮಾತಾಡಿದ ಸಚಿವರು ನಾನು ಮಾಧ್ಯಮಗಳಲ್ಲಿ ಈ ವಿಚಾರ ನೋಡಿಲ್ಲ. ಈ ಕುರಿತು ನನಗೆ ಮಾಹಿತಿ ಇಲ್ಲ, ಎಂದು ಸಚಿವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
PublicNext
08/09/2021 04:31 pm