ಕಾಬೂಲ್: ಪಂಜ್‌ಶೀರ್ ಪ್ರಾಂತ್ಯವನ್ನೂ ವಶಕ್ಕೆ ಪಡೆದಿರುವ ತಾಲಿಬಾನಿಗಳು ಅಫ್ಘಾನಿಸ್ಥಾನದಲ್ಲಿ ಸರ್ಕಾರ ರಚಿಸಿಲು ಮುಂದಾಗಿದ್ದಾರೆ. ಈ ಕಾರ್ಯಕ್ರಮಕ್ಕೆ ಆರು ದೇಶಗಳಿಗೆ ತಾಲಿಬಾನ್ ಆಹ್ವಾನ ನೀಡಿದೆ.
ಪಾಕಿಸ್ತಾನ, ಚೀನಾ, ರಷ್ಯಾ, ಟರ್ಕಿ, ಇರಾನ್ ಮತ್ತು ಕತಾರ್ ದೇಶಗಳಿಗೆ ತಾಲಿಬಾನ್ ಸರ್ಕಾರ ರಚನೆ ಸಮಾರಂಭದಲ್ಲಿ ಭಾಗವಹಿಸಲು ಆಹ್ವಾನಿಸಿದೆ ಎಂದು ವರದಿಯಾಗಿದೆ. ಇದು 20 ವರ್ಷಗಳ ಬಳಿಕ ಮತ್ತೆ ಅಫ್ಘಾನಿಸ್ಥಾನದಲ್ಲಿ ಅಧಿಕಾರ ಪಡೆಯುತ್ತಿರುವ ತಾಲಿಬಾನ್ ತನ್ನ ವಿದೇಶಿ ನೀತಿಯ ಮೊದಲ ಹೆಜ್ಜೆಗೆ ನಾಂದಿ ಹಾಡಿದೆ.
ಹೊಸ ಸರ್ಕಾರದಲ್ಲಿ ಪಾಕಿಸ್ತಾನದ ಪ್ರಭಾವವಿರುವುದು ಸ್ಪಷ್ಟವಾಗಿದೆ. ಐಎಸ್‌ಐ ಮುಖ್ಯಸ್ಥ ಲೆ.ಜ.ಫೈಜ್ ಹಮೀದ್ ಕಾಬೂಲ್‌ಗೆ ತೆರಳಿ ತಾಲಿಬಾನ್ ನಾಯಕರೊಂದಿಗೆ ಮಾತುಕತೆ ನಡೆಸಿದ್ದಾರೆ. ಇದರೊಂದಿಗೆ ಹೊಸ ಸರ್ಕಾರದ ಮುಖ್ಯಸ್ಥನಾಗಿ ತನ್ನ ಪ್ರತಿನಿಧಿಯನ್ನೇ ನೇಮಕ ಮಾಡಬೇಕು ಎಂಬ ಐಎಸ್‌ಐ ಷರತ್ತನ್ನು ಪರಿಗಣಿಸಲಾಗಿದ್ದು, ನಾಯಕತ್ವದಲ್ಲಿ ಬದಲಾವಣೆ ಮಾಡಲಾಗಿದೆ ಎನ್ನಲಾಗಿದೆ.
1990ರಲ್ಲಿ ತಾಲಿಬಾನ್ ಸರ್ಕಾರದೊಂದಿಗೆ ಗುರುತಿಸಿಕೊಂಡಿದ್ದ ಯುಎಇ ಮತ್ತು ಸೌದಿ ಅರೇಬಿಯಾ ಈ ಬಾರಿ ಅಂತರ ಕಾಯ್ದುಕೊಂಡಿದೆ. ಈ ಬಾರಿ ಬಹಳಷ್ಟು ದೇಶಗಳು ಕಾದು ನೋಡುವ ತಂತ್ರಕ್ಕೆ ಮುಂದಾಗಿದೆ.
PublicNext
08/09/2021 07:28 am