ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಉಡುಪಿ: ಜಾತಿಗಣತಿಗೆ ಸುಮಾರು 150 ಕೋಟಿ ರೂಪಾಯಿ ಖರ್ಚಾಗಿದೆ: ಜಿ.ಪರಮೇಶ್ವರ್

ಉಡುಪಿ: ಜಾತಿಗಣತಿಗೆ ಸುಮಾರು 150 ಕೋಟಿ ರೂಪಾಯಿ ಖರ್ಚಾಗಿದೆ.ಸರ್ಕಾರದ ಹಣ ಖರ್ಚು ಮಾಡಿ ವರದಿ ಸಿದ್ದಪಡಿಸಲಾಗಿದೆ.

ಆ ವರದಿ ಹೊರಗಡೆ ತರಬೇಕು ಎಂಬುದು ನಮ್ಮೆಲ್ಲರ ಅಭಿಪ್ರಾಯ ಎಂದು ಜಿ.ಪರಮೇಶ್ವರ್ ಹೇಳಿದ್ದಾರೆ.

ಉಡುಪಿಯಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತಿರಿಸಿದ ಅವರು,ನಮ್ಮ ಸರ್ಕಾರ ಇದ್ದಾಗ ವರದಿ ಸಂಪೂರ್ಣ ಆಗಿರಲಿಲ್ಲ.

ಕಾಂತರಾಜ್ ಅವರು ಈಗ ವರದಿಯನ್ನು ಕೊಟ್ಟಿದ್ದಾರೆ.ರಾಜ್ಯ ಸರ್ಕಾರದ ಕೈಯಲ್ಲಿರುವ ವರದಿಯನ್ನು ಅಸೆಂಬ್ಲಿಯಲ್ಲಿ ಚರ್ಚೆ ಮಾಡಲಿ.ವರದಿಯಲ್ಲಿ ನ್ಯೂನತೆಗಳಿದ್ದರೆ ಸರಿಪಡಿಸುವ ತೀರ್ಮಾನ ಕೈಗೊಳ್ಳಲಿ.

ವರದಿ ಬಹಿರಂಗ ಮಾಡುವುದರಿಂದ ಸರಕಾರಕ್ಕೆ ಮುಜುಗರ ಏನಿದೆ?ಯಾವುದೇ ಸಮುದಾಯ ಹೆಚ್ಚಿರುವುದು ಅಥವಾ ಕಡಿಮೆ ಇರುವುದು ಸ್ವಾಭಾವಿಕ.ರೀಸರ್ವೆ ಮಾಡುವ, ಈ ವರದಿಯನ್ನು ಒಪ್ಪಿಕೊಳ್ಳುವ ಅಧಿಕಾರದ ಸರಕಾರಕ್ಕಿದೆ ಎಂದು ಕಾಂಗ್ರೆಸ್ ನಾಯಕ ಜಿ ಪರಮೇಶ್ವರ್ ಹೇಳಿದ್ದಾರೆ.

Edited By : Manjunath H D
PublicNext

PublicNext

07/09/2021 02:35 pm

Cinque Terre

98.66 K

Cinque Terre

3

ಸಂಬಂಧಿತ ಸುದ್ದಿ