ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚಿತ್ರದುರ್ಗ: ಸುದ್ದಿಗಾಗಿ ಪ್ರಶ್ನೆ ಕೇಳಬೇಡಿ, ನಾವು ಮಾಡುವ ಕೆಲಸವನ್ನು ಸುದ್ದಿ ಮಾಡಿ : ಸಚಿವ ಸಿಸಿ ಪಾಟೀಲ್

ಚಿತ್ರದುರ್ಗ: ಪಂಚಮಸಾಲಿ ಸಮಾಜದ ಮೀಸಲಾತಿ ವಿಚಾರದಲ್ಲಿ ನಿಮಗೆ ಸರ್ಕಾರ ಬೇಕಾ ಅಥವಾ ಪಂಚಮಸಾಲಿ ಸಮಾಜ ಬೇಕಾ ಎಂದು ಮಾಧ್ಯಮದವರು ಸಚಿವರನ್ನು ಪ್ರಶ್ನೆ ಮಾಡಿದಾಗ ನನಗೆ ಸರ್ಕಾರ ಹಾಗೂ ಸಮಾಜ ಎರಡು ಕಣ್ಣುಗಳು, ಎರಡರಲ್ಲಿ ಯಾವುದು ಬೇಕು ಅಂತ ಕೇಳಿದರೆ ನಾನು ಏನು ಉತ್ತರಿಸಿ, ಸುದ್ದಿಗಾಗಿ ಪ್ರಶ್ನೆ ಕೇಳಬೇಡಿ, ನಾವು ಮಾಡುವ ಕೆಲಸವನ್ನು ಸುದ್ದಿ ಮಾಡಿ ಎಂದು ಲೋಕೋಪಯೋಗಿ ಸಚಿವ ಸಿಸಿ ಪಾಟೀಲ್ ಹೇಳಿದರು. ಚಿತ್ರದುರ್ಗ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ನಾನು ಸಚಿವನಾದ ಮೇಲೆ ಮೊದಲ ಆದ್ಯತೆ ಪ್ರವಾಹ ಪೀಡಿತ ಪ್ರದೇಶಗಳಿಗೆ ಆದ್ಯತೆ ನೀಡಿದ್ದೇನೆ ಎಂದರು.

ಪ್ರವಾಹದಿಂದ ಹಾಳಾದ ರಸ್ತೆ, ಸಂಪರ್ಕ ಇವುಗಳಿಗೆ ಬೇಕಾಗಿರುವ ಅನುದಾನವನ್ನು ಸಿಎಂ ಬಿಡುಗಡೆ ಮಾಡಿದ್ದಾರೆ ಎಂದು ಸಚಿವರು ತಿಳಿಸಿದರು. ನಮ್ಮ ಶಾಸಕರುಗಳ ಬೇಡಿಕೆಯೂ ರಸ್ತೆ ಅಭಿವೃದ್ದಿ, ಸಂಪರ್ಕ ಹಾಗೂ ಮೇಲ್ದರ್ಜೆಗಾಗಿ ಇದೆ. ಅವುಗಳ ಬಗ್ಗೆ ಸಿಎಂ ಜೊತೆ ಚರ್ಚೆ ಮಾಡಿ ಹಣವನ್ನು ಬಿಡುಗಡೆ ಮಾಡಲು ಪ್ರಯತ್ನ ಮಾಡುತ್ತೇನೆ ಎಂದರು. ಕೋವಿಡ್ ಸಮಯದಲ್ಲಿ ಹಾರ ತುರಾಯಿ ತೆಗೆದುಕೊಳ್ಳಬಾರದು ಎಂದು ನಿಯಮವನ್ನು ಮಾಡಿ ಸಿಎಂ ಅವರೇ ಉಲ್ಲಂಘಿಸಿದ್ದಾರೆ ಎಂಬ ಪ್ರಶ್ನೆಗೆ ಉತ್ತರಿಸಿದ ಸಚಿವರು ಸಿಎಂ ಅವರು ಹಾರ, ತುರಾಯಿ ಕೊಡಬೇಡಿ ಪುಸ್ತಕ ನೀಡಿ ಎಂಬ ಸಂದೇಶ ನಿಡಿದ್ದರಿಂದ ಬಹಳಷ್ಟು ಪುಸ್ತಕ ಅಂಗಡಿಗಳ ಮಾಲೀಕರು ಖುಷಿಯಾಗಿದ್ದಾರೆ. ಉತ್ತಮ ಪುಸ್ತಕಗಳು ಕೂಡ ಖಾಲಿಯಾಗಿವೆ. ನೂರು ಒಳ್ಳೆ‌ ಕೆಲಸ ಮಾಡಿ ಒಂದು ತಪ್ಪಾದರೆ ಅದನ್ನೆ ಕೇಳುತ್ತೀರಲ್ಲ ಎಂದು ಮಾಧ್ಯಮದವರಿಗೆ ಮರು ಪ್ರಶ್ನೆ ಹಾಕಿದರು. ಅಭಿಮಾನಿಗಳು ತಂದು ಕೊಡುತ್ತಾರೆ ತೆಗೆದುಕೊಳ್ಳದೇ ಹೋದರೆ ಅವರು ಬೇಸರ ಮಾಡಿಕೊಳ್ಳುತ್ತಾರೆ ಎಂಬ ಕಾರಣಕ್ಕೆ ತೆಗೆದುಕೊಂಡಿರುತ್ತಾರೆ ಎಂದು ಸಮಜಾಷಿಸಿಕೊಂಡರು.

ಪಂಚಮಸಾಲಿ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿದ ಸಚಿವರು, ನಾನು ಸಮಾಜದ ವ್ಯಕ್ತಿ ಯಾಗಿ ಸರ್ಕಾರದ ಮಂತ್ರಿಯಗಿ ನಾನು‌ನಿರ್ವಹಿಸುವ ಕೆಲಸವನ್ನು ನಾನು ಮಾಡುತ್ತೆನೆ. ಇನ್ನು ಸಿಎಂ ಹಾಗೂ ಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿದ್ದಾರೆ. ಆದರೆ ಅದರ ಬಗ್ಗೆ ನನಗೆ ಮಾಹಿತಿ ಇಲ್ಲ, ಆದರೂ ಒಂದೊಳ್ಳೆ ರೀತಿಯಲ್ಲಿ ವಿವಾದ ಬಗೆಹರಿಯುತ್ತದೆ ಎಂಬ ವಿಶ್ವಾಸ ನನಗಿದೆ ಎಂದರು. ಸರ್ಕಾರ ಈಗಾಗಲೇ 2 ಎ ಮೀಸಲಾತಿ ಕೊಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ಯಾರಿಗೂ ಅನ್ಯಾಯ ಆಗದ ರೀತಿಯಲ್ಲಿ‌ ಮಾಡಬೇಕು ಆ ರೀತಿಯಲ್ಲಿ‌ ಮಾಡಲು ಸಿಎಂ ಮುಂದಾಗಿದ್ದಾರೆ. ಇದು ಸರ್ಕಾರ ಸರಿಯಾದ ನಿಟ್ಟಿನಲ್ಲಿ ಹೆಜ್ಜೆ ಇಟ್ಟಿದೆ ಎಂಬ ವಿಶ್ವಾವಿದೆ ಎಂದರು.

Edited By : Manjunath H D
PublicNext

PublicNext

05/09/2021 06:09 pm

Cinque Terre

123.31 K

Cinque Terre

3

ಸಂಬಂಧಿತ ಸುದ್ದಿ