ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ಅರಮನೆಯಲ್ಲಿ ಇಷ್ಟು ದಿನಗಳ ಕಾಲ ಒಳಾಂಗಣ ಚಿತ್ರೀಕರಣಕ್ಕೆ ನಿರ್ಬಂಧ ವಿಧಿಸಲಾಗಿತ್ತು. ಈಗ ಅಲ್ಲಿನ ಒಳಾಂಗಣ ಚಿತ್ರೀಕರಣಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತಿದೆ.
ಫ್ಲ್ಯಾಷ್ ರಹಿತ ಛಾಯಾಚಿತ್ರ ಕ್ಲಿಕ್ಕಿಸಲು ವಿಡಿಯೋ ಚಿತ್ರೀಕರಣ ಸೇರಿದಂತೆ ಎಲ್ಲಾ ರೀತಿಯ ಚಿತ್ರೀಕರಣಕ್ಕೆ ಸಚಿವ ಸಂಪುಟ ಅಸ್ತು ಎಂದಿದೆ. ಮೈಸೂರು ಅರಮನೆ ಚಿತ್ರೀಕರಣ ಮಾಡಿದ್ದ ಪ್ರಕರಣದ ಬಗ್ಗೆ ಲೋಕಾಯುಕ್ತ ತನಿಖೆ ನಡೆದಿತ್ತು. ಅದರಲ್ಲಿ ಅಷ್ಟೊಂದು ಗಂಭೀರತೆ ಇಲ್ಲ ಎಂದು ಪ್ರಕರಣ ಕೈ ಬಿಡಲಾಗಿದೆ.
PublicNext
05/09/2021 08:36 am