ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದಾವಣಗೆರೆ: ವೀರಶೈವ ಲಿಂಗಾಯತರೆಲ್ಲರೂ ಒಂದೇ, ಇದು ನಮ್ಮ ತೀರ್ಮಾನ: ಶಾಮನೂರು ಸ್ಪಷ್ಟನೆ

ದಾವಣಗೆರೆ: ವೀರಶೈವ ಲಿಂಗಾಯತ ಎಲ್ಲರೂ ಒಂದೇ. ಇದು ನಮ್ಮ ತೀರ್ಮಾನ ಎಂದು ಅಖಿಲ ಭಾರತ ವೀರಶೈವ ಮಹಸಭಾದ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ಸ್ಪಷ್ಟಪಡಿಸಿದ್ದಾರೆ.

ದಾವಣಗೆರೆಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ‌ ಅವರು, ಸಾದರು, ಪಂಚಮಸಾಲಿ, ಗಾಣಿಗರು, ಬಣಜಿಗರು ಸೇರಿದಂತೆ ಎಲ್ಲಾ ಪಂಗಡದವರೂ ವೀರಶೈವ ಲಿಂಗಾಯತರೇ. ಇದರಲ್ಲಿ ಎರಡು ಮಾತಿಲ್ಲ‌. ಎಲ್ಲರನ್ನೂ ಮಹಾಸಭಾ ವೀರಶೈವ ಲಿಂಗಾಯತರೆಂದೇ ಪರಿಗಣಿಸುತ್ತದೆ ಎಂದು ಹೇಳಿದರು.

ಇನ್ನು ಪ್ರತ್ಯೇಕ ಲಿಂಗಾಯತ ಧರ್ಮ ಬೇಕು ಎನ್ನುವವರು ಹೋರಾಟ ಮಾಡಲಿ. ಅವರು ಮಾಡ್ಕಂಡ್ರೆ ಏನೂ ಆಗಂಗಿಲ್ಲ. ಮತ್ತೆ ಕಚ್ಚಾಡ್ತಾರೆ. ಅದರ ಬಗ್ಗೆ ಹೆಚ್ಚು ಚರ್ಚೆ ಬೇಡ ಎಂದ ಅವರು ಶಾಸಕ ಎಂ. ಬಿ. ಪಾಟೀಲ್ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದರು. "ಅವನೇನೂ ಹೋಗ್ತಾನೆ, ಅವ್ನ ಹಣೆಬರಹ. ಎಲ್ಲರೂ ಒಂದೇ ಎಂಬ ನಿಲುವು ಅಚಲ. ಇದರಲ್ಲಿ ಬದಲಾವಣೆ ಇಲ್ಲ. ಸಚಿವ ಮುರುಗೇಶ್ ನಿರಾಣಿ ಸರಿಯಾಗಿಯೇ ಹೇಳಿದ್ದಾರೆ ಎಂದಿದ್ದಾರೆ.

ಯಡಿಯೂರಪ್ಪರ ನಂತರ ಲಿಂಗಾಯತ ನಾಯಕರಾಗಲು ಎಂ. ಬಿ. ಪಾಟೀಲ್ ಹೊರಟಿದ್ದಾರಲ್ಲಾ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಅವರೂರಲ್ಲಿ ನಿಂತು ಗೆದ್ದು ಬರಲಿ ಎಂದು ಶಾಮನೂರು ಕುಟುಕಿದರು.

ನಾಯಕರಾಗಬೇಕು ಅಂತಾ ಬಹಳ ಜನ ಹೋಗ್ತಾರೆ. ನಾನು ಹೋಗಿ ನಾಯಕನಾಗಬೇಕೆಂದರೆ ಆಗುತ್ತಾ. ಜನರು ಆರಿಸಬೇಕು, ಒಪ್ಪಿಕೊಳ್ಳಬೇಕು ನಾಯಕರು ಅಂತ. ಜನರು ಇವ್ರು ನಮ್ಮ ನಾಯಕರು ಎಂದು ಹೇಳಿದಾಗ ನಾಯಕರಾಗುವುದು ಎಂದು ಶಾಮನೂರು ಅಭಿಪ್ರಾಯಪಟ್ಟರು.

ಇನ್ನು ಎಸ್. ಎ. ಜಾಮದಾರ್ ಅವರು ಲಿಂಗಾಯತ ಧರ್ಮ ಬೇಕು ಎಂಬ ಮಾತಿಗೆ ಪ್ರತಿಕ್ರಿಯೆ ನೀಡಿದ ಶಾಮನೂರು, ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ಜಾಮದಾರ್ ಹೆಸರು ಹೇಳಬೇಡ. ಸವಕಲು ನಾಣ್ಯ. ಸುಮ್ಮನೆ ಮಾತನಾಡ್ತಾರೆ ಎಂದು ಹೇಳಿದರು.

Edited By : Shivu K
PublicNext

PublicNext

04/09/2021 01:59 pm

Cinque Terre

97.2 K

Cinque Terre

1

ಸಂಬಂಧಿತ ಸುದ್ದಿ