ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮತಗಟ್ಟೆಯ ಮುಂದೆ ನಿಂತು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಮತದಾರರು

ಬೆಳಗಾವಿ: ರಾಜ್ಯದ ಮೂರು ಪಾಲಿಕೆಗಳ ಚುನಾವಣಾ ಮತದಾನ ಇಂದು ಶಾಂತಿಯುತವಾಗಿ ನಡೆಯುತ್ತಿದೆ. ಅದರಲ್ಲೂ ಬೆಳಗಾವಿಯಲ್ಕೂ ಕೂಡಾ ಮತದಾನ ಪ್ರಕ್ರಿಯೆಯು ಶಾಂತಿಯುತವಾಗಿ ನಡೆದಿದ್ದು, ಅಲ್ಲಲ್ಲಿ ಕೆಲವಿಷ್ಟು ಅವಾಂತರ ಘಟನೆಗಳಿಗೂ ಸಾಕ್ಷಿಯಾಗಿದೆ.

‌ಹೌದು ಬೆಳಗಾವಿಯಲ್ಲಿ ಮತಗಟ್ಟೆ ಬದಲಿಸಿದ ಅಧಿಕಾರಿಗಳ ವಿರುದ್ಧ ಮತದಾರರು ಆಕ್ರೋಶ ವ್ಯಕ್ತಪಡಿಸಿದರಲ್ಲದೆ, ಬೇಕಾಬಿಟ್ಟಿಯಾಗಿ ಮತಗಟ್ಟೆ ವಿಂಗಡಣೆ ಮಾಡಿದ್ದಾರೆ ಎಂದು ಮತದಾರರ ಅಸಮಾಧಾನ ಹೊರ ಹಾಕಿರುವ ಘಟನೆ ನಡೆದಿದೆ.

ಬೆಳಗಾವಿ ನಗರದ ವಡಗಾಂವನ ರೈತ ಗಲ್ಲಿಯಲ್ಲಿ ಈ ಘಟನೆ ನಡೆದಿದ್ದು ಮತಗಟ್ಟೆ 35ರಲ್ಲಿ ವೋಟ್ ಮಾಡುತ್ತಿದ್ದ ಮತದಾರರು ಏಕಾಏಕಿ ದಿಢೀರ್ ನೇ ಮತಗಟ್ಟೆ 45ಮತಗಟ್ಟೆಗೆ ಮತದಾರರ ಮತದಾನ ಪ್ರಕ್ರಿಯೆ ಸ್ಥಳಾಂತರ ಮಾಡಿದ್ದಕ್ಕೇ ಮತದಾರರು ಆಕ್ರೋಶಗೊಂಡಿದ್ದಾರೆ.

ಬೆಳಗ್ಗೆಯಿಂದ ಮತಗಟ್ಟೆಗೆ ಮತದಾನ ಮಾಡಲು ಅಲೆದ್ರೂ ಅಧಿಕಾರಿಗಳಿಂದ ಸಿಗದ ಸ್ಪಂದನೆಯಿಂದ ಬೇಸತ್ತು ಮತಗಟ್ಟೆಗಳಲ್ಲಿ ಹೆಸರು ಹುಡುಕಲು ಆಗದೇ ಮತದಾರರು ಮನೆಗಳಿಗೆ ವಾಪಾಸ್ ಆಗುತ್ತಿರುವ ಕೆಲವು ದೃಶ್ಯಗಳು ಕೂಡಾ ಕಂಡು ಬಂದವು.

ಇದರಲ್ಲಿ ಮಹಿಳೆಯರು, ವಯಸ್ಸಾದವರು ಎರಡು ಮೂರು ಕಿಮೀ ದೂರ ಹೋಗಿ ವೋಟ್ ಮಾಡಬೇಕಾಗಿರುವ ಪರಿಸ್ಥಿತಿ ಕೂಡಾ ಬಂದೊಗಿತು. ಇದರಿಂದ ಕುಪಿತಗೊಂಡಿರುವ ಮತದಾರರು

ಅಧಿಕಾರಿಗಳ ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿದ್ದಾರೆ ಎಂದು ಮತದಾರರ ಮತಗಟ್ಟೆ ಮುಂದೆ ನಿಂತು ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರ ಹಾಕಿದರು.

Edited By : Nagesh Gaonkar
PublicNext

PublicNext

03/09/2021 03:12 pm

Cinque Terre

75.8 K

Cinque Terre

2

ಸಂಬಂಧಿತ ಸುದ್ದಿ