ಚಿತ್ರದುರ್ಗ : ರಾಜ್ಯದಲ್ಲಿ ಮಿನಿ ವಿಧಾನಸೌಧ ಎಂಬ ಪದ ಬದಲಿಗೆ ತಾಲೂಕು ವಿಧಾನಸೌಧ ಎಂಬ ಹೆಸರನ್ನು ಇಡಲು ಕ್ರಮಕೈಗೊಳ್ಳುತ್ತೇನೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು. ಮಿನಿ ಎಂಬುದು ಸರಿಯಿಲ್ಲ, ಮಿನಿ ಎಂಬುದು ಇಂಗ್ಲಿಷ್ ಪದ, ಮಿನಿ ಎಂದರೆ ಚಿಕ್ಕದು, ಅದನ್ನು ತೆಗೆದು ಹಾಕಿ ತಾಲೂಕುಸೌಧ ಮಾಡಲು ಚಿಂತನೆ ನಡೆಸಲಾಗಿದೆ ಎಂದರು. ಈಗಾಗಲೇ ಚಳ್ಳಕೆರೆ, ಮೊಳಕಾಲ್ಮೂರು ತಾಲೂಕಿನಲ್ಲಿ ವಿಧಾನಸೌಧ ಉದ್ಘಾಟನೆಗೆ ಸಿದ್ದಗೊಂಡಿದೆ. ಹಿರಿಯೂರು, ಹೊಳಲ್ಕೆರೆ ತಾಲೂಕಿನಲ್ಲಿ ಸಹ 10 ಎಕರೆ ಜಾಗ ಗುರುತಿಸಲಾಗಿದೆ ಎಂದು ಹೇಳಿದರು.
ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ಪಟ್ಟಣದಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ಮಿನಿ ವಿಧಾನಸೌಧ ಕಾಮಗಾರಿ ಭೂಮಿಪೂಜೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ತಾಲೂಕು ಕಚೇರಿಗಳಲ್ಲಿ ಬರುವ ಬಡ ಜನರಿಗೆ ಸೌಲಭ್ಯ ಸಿಗುವಂತಾಗಬೇಕು, ಕಿರುಕುಳ ಕೊಡಕ್ಕಲ್ಲ ಅಲ್ಲ ಎಂದರು. ತಾಲೂಕು ಕಛೇರಿಗೆ ವಯಸ್ಸು ಆದವರು ವೃದ್ಯಾಪ್ಯ ವೇತನಕ್ಕೆ ಬರ್ತಾರೆ,ಅಂಗವಿಕಲರ ವೇತನ, ವಿಧವಾ ವೇತನಕ್ಕೆ ಬರ್ತಾರೆ. ವಯಸ್ಸು ಆದವರ ಗೋಳನ್ನು ನೋಡೋಕೆ ಆಗೊದಿಲ್ಲ. ಯಾರೋ ಸಚಿವರು, ಸಿಎಂ ಬಂದ್ರೆ ಸಾಲಿನಲ್ಲಿ ನಿಲ್ಲುತ್ತಾರೆ.
ದಾರಿ ಉದ್ದಕ್ಕೂ ವಯಸ್ಸು ಆದವರು 60,70,80 ವರ್ಷ ದಾಟಿದವರು ದಾರಿಯಲ್ಲಿ ನಿಂತುಕೊಳ್ತಾರೆ. ಇವರನ್ನು ನೋಡಿದರೆ ನಿಜಕ್ಕೂ ಕರುಳು ಚುರುಕು ಅನ್ನುತ್ತದೆ. ಇದನ್ನು ಕಳೆದ ಹತ್ತನ್ನೇರಡು ವರ್ಷಗಳಿಂದ ನೋಡ್ತಾ ಬಂದಿನಿ, ಇದು ಬದಲಾಗಬೇಕು,
ವಯಸ್ಸು ಆದವರು ವೃದ್ಧಾಪ್ಯ ವೇತನಕ್ಕೆ ಬಂದವರ ಕೆಲಸವನ್ನು ಬಗೆಹರಿಸಬೇಕು. ಇನ್ನುಮುಂದೆ ವೃದ್ಧಾಪ್ಯ ವೇತನಕ್ಕೆ ದಾರಿಯಲ್ಲಿ ಯಾರು ಅರ್ಜಿ ಹಿಡಿದು ನಿಂತುಕೊಳ್ಳಬಾರದು, ಅಧಿಕಾರಿಗಳು ಮನೆ ಬಾಗಿಲಿಗೆ ಹೋಗಿ ವೃದ್ಧಾಪ್ಯ ವೇತನ ಮಾಡಿ ಕೊಡಬೇಕು ಎಂದು ಅಧಿಕಾರಿಗಳಿಗೆ ಸಚಿವರು ಖಡಕ್ ಆಗಿ ಸೂಚಿಸಿದರು. ಇನ್ನುಮುಂದೆ ನಮ್ಮ ರಾಜ್ಯದಲ್ಲಿ ಆಧಾರ್ ಕಾರ್ಡ್ ನಲ್ಲಿ 60 ವರ್ಷ ದಾಟಿದ ಮೇಲೆ, ಸಂಬಂಧ ಅಧಿಕಾರಿಗಳು ಫಲಾನುಭವಿಗಳ ಮನೆಗೆ ಹೋಗಿ ವೃದ್ಧಾಪ್ಯ ವೇತನ ಆದೇಶ ಪತ್ರ ನೀಡಿ ಬರಬೇಕು ಎಂದರು.
ಈಗಾಗಲೇ 30 ಸಾವಿರ ಜನರಿಗೆ ಮನೆ ಬಾಗಿಲಿಗೆ ವೃದ್ಧಾಪ್ಯ ವೇತನ ಕೊಡಲಾಗಿದೆ. ಒಟ್ಟು ರಾಜ್ಯದಲ್ಲಿ 68 ಲಕ್ಷ ಜನರಿಗೆ ವೇತನ ಕೊಡಲಾಗುತ್ತಿದೆ ಎಂದರು. ಕೋವಿಡ್ ಕಡಿಮೆ ಆದಮೇಲೆ ಜಿಲ್ಲಾಧಿಕಾರಿಗಳು ಹಳ್ಳಿಗೆ ಹೋಗಿ ಅಲ್ಲೇ ಒಂದು ದಿನ ವಾಸ್ತವ್ಯ ಹೂಡುವ ಕೆಲಸ ಆಗಬೇಕು. ಕಾಟಾಚಾರಕ್ಕೆ ಹೋಗಿ ಕೆಲಸ ಮಾಡುವಂತಿಲ್ಲ, ಜನರಿಗೆ ಮನಮುಟ್ಟುವಂತೆ ಕೆಲಸ ಮಾಡಿ ಎಂದರು. ನಾನು ಗ್ರಾಮದಲ್ಲಿ ವಾಸ್ತವ್ಯ ಹೂಡಿದರೆ ಶಾಲೆ, ಅಂಗನವಾಡಿಯಲ್ಲೇ ಮಲಗುವೆ ಎಂದು ತಿಳಿಸಿದರು.
ಹೊಸದುರ್ಗ ಕ್ಷೇತ್ರದ ಅಭಿವೃದ್ಧಿಗೆ ಶಾಸಕ ಗೂಳಿಹಟ್ಟಿ ಡಿ ಶೇಖರ್ ಏನು ಕೇಳಿದರೂ ನಾನು ನನ್ನ ಕೈಯಲ್ಲಾದ ಸಹಾಯ ಮಾಡುತ್ತೆನೆ ಎಂದು ಸಚಿವರು ತಿಳಿಸಿದರು.
PublicNext
02/09/2021 05:44 pm