ವಿಜಯಪುರ: ನನ್ನ ಯೋಗ್ಯತೆ ನೋಡಿ ಮಂತ್ರಿ ಸ್ಥಾನ ನೀಡಲಿ. ಬ್ಲ್ಯಾಕ್ ಮೇಲ್ ಮಾಡಿ, ಸಿಡಿ ಇಟ್ಕೊಂಡು, ಹಣ ಕೊಟ್ಟು ಮಂತ್ರಿ ಸ್ಥಾನ ಕೇಳುವ ಮಗಾ ನಾನಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನಗರದಲ್ಲಿ ಮಾತಾಡಿದ ಅವರು, "ಭಷ್ಟಚಾರದ ಆರೋಪ ಇದ್ದರೂ ಶಶಿಕಲಾ ಜೊಲ್ಲೆಗೆ ಸಚಿವ ಸ್ಥಾನ ನೀಡಿದ್ದಾರೆ. ಯಾಕೆ ಸಚಿವ ಸ್ಥಾನ ನೀಡಿದರು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಅವರೇ ಹೇಳಬೇಕು. ನಾನು ಮಂತ್ರಿ ಮಾಡುವವನು ಅಲ್ಲ, ಹೈಕಮಾಂಡ್ ಮೊದಲೇ ಅಲ್ಲ. ನನಗೆ ಮಂತ್ರಿ ಸ್ಥಾನ ಕೊಡಿ ಎಂದು ಯಾವತ್ತೂ ಕೇಳಿಲ್ಲ. ಬ್ಲ್ಯಾಕ್ ಮೇಲ್ ಮಾಡಿ, ಸಿಡಿ ಇಟ್ಕೊಂಡು ಮಂತ್ರಿ ಸ್ಥಾನ ನಾನು ಕೇಳೋದಿಲ್ಲ. ಹಣ ಕೊಟ್ಟು, ಕಾರು ನೀಡಿ ಮಂತ್ರಿ ಸ್ಥಾನ ಪಡೆಯುವ ಅವಶ್ಯಕತೆಯೂ ಇಲ್ಲ" ಎಂದು ಖಡಕ್ ಆಗಿ ಹೇಳಿದರು.
PublicNext
31/08/2021 11:02 pm