ನವದೆಹಲಿ: ಸದಾ ಒಂದಿಲ್ಲೊಂದು ರೀತಿಯಲ್ಲಿ ಕೇಂದ್ರಕ್ಕೆ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಚಾಟಿ ಬೀಸುತ್ತಲೇ ಇರುತ್ತಾರೆ. ಸದ್ಯ ಬುಡಕಟ್ಟು ಸಮುದಾಯದ ವ್ಯಕ್ತಿಯೊಬ್ಬನನ್ನು ವಾಹನಕ್ಕೆ ಕಟ್ಟಿ ಹಾಕಿ ಎಳೆದಿರುವ ಘಟನೆ ಸೇರಿದ್ದಂತೆ ಇತ್ತೀಚಿನ ಗುಂಪು ಹಿಂಸಾಚಾರದ ಸಂಬಂಧಿಸಿ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ಅವರು, ವಿಡಿಯೋವೊಂದನ್ನು ಹಂಚಿಕೊಂಡಿದ್ದಾರೆ. ಇದರಲ್ಲಿ ಮಧ್ಯ ಪ್ರದೇಶದ ನೀಮಚ್ ಜಿಲ್ಲೆಯಲ್ಲಿ 40 ವರ್ಷದ ಬುಡಕಟ್ಟು ವ್ಯಕ್ತಿಯೊಬ್ಬನನ್ನು ಎಂಟು ಜನರು ಥಳಿಸಿದ್ದು, ವಾಹನದ ಹಿಂಭಾಗಕ್ಕೆ ಕಟ್ಟಿ ಸ್ವಲ್ಪ ದೂರ ಎಳೆದಿದ್ದಾರೆ. ಕಳೆದ ವಾರ ಜಿಲ್ಲಾಸ್ಪತ್ರೆಯಲ್ಲಿ ಆತ ಚಿಕಿತ್ಸೆ ಪಡೆಯುತ್ತಿದ್ದಾಗ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಮಧ್ಯ ಪ್ರದೇಶದ ಉಜ್ಜಯಿನಿ ಜಿಲ್ಲೆಯ ಗ್ರಾಮವೊಂದರಲ್ಲಿ ಭಾನುವಾರ ಮುಸ್ಲಿಂ ವ್ಯಕ್ತಿಯೊಬ್ಬರಿಗೆ ಜೈ ಶ್ರೀರಾಮ್ ಘೋಷಣೆ ಕೂಗುವಂತೆ ಬೆದರಿಕೆಯೊಡ್ಡಿದ ವಿಡಿಯೋವನ್ನು ಸಹ ರಾಹುಲ್ ಹಂಚಿಕೊಂಡಿದ್ದಾರೆ.
ಸಂವಿಧಾನದ 15ನೇ ವಿಧಿ ಧರ್ಮ, ಜನಾಂಗ, ಜಾತಿ, ಲಿಂಗ, ಹುಟ್ಟಿದ ಸ್ಥಳ ಅಥವಾ ಇತರೆ ಯಾವುದೇ ಆಧಾರದ ಮೇಲೆ ಯಾವುದೇ ಪ್ರಜೆಯ ವಿರುದ್ಧ ತಾರತಮ್ಯ ಮಾಡಬಾರದು ಎಂದು ಹೇಳುತ್ತದೆ. ಆದರೆ, 25 ನೇ ವಿಧಿಯು ಆತ್ಮಸಾಕ್ಷಿಯ ಸ್ವಾತಂತ್ರ್ಯ ಮತ್ತು ಮುಕ್ತ ವೃತ್ತಿ , ಅಭ್ಯಾಸ ಮತ್ತು ಧರ್ಮದ ಪ್ರಚಾರದ ಬಗ್ಗೆ ಹೇಳುತ್ತದೆ. ಈ ಎರಡು ವಿಧಿಗಳನ್ನು ಮಾರಾಟ ಮಾಡಲಾಗಿದೆಯೇ ಎಂದು ಅವರು ಪ್ರಶ್ನಿಸಿದ್ದಾರೆ.
PublicNext
31/08/2021 08:13 am