ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಶೂ ಹಾಕಿಕೊಂಡೇ ದೇವಸ್ಥಾನದೊಳಗೆ ಹೋಗಿ ದೇವರ ದರ್ಶನ: ಸಚಿವ ಚವ್ಹಾಣ್ ವಿರುದ್ಧ ವ್ಯಾಪಕ ಆಕ್ರೋಶ

ಹಾವೇರಿ: ಶೂ ಹಾಕಿಕೊಂಡೇ ದೇವಸ್ಥಾನದೊಳಗೆ ಹೋಗಿ ದೇವರ ದರ್ಶನ ಪಡೆದ ಪಶುಸಂಗೋಪನಾ ಸಚಿವ ಪ್ರಭು ಚವ್ಹಾಣ್ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸಚಿವರು ಇಂದು ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರ ಪಟ್ಟಣಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪಟ್ಟಣದ ಕೋಟೆ ಆವರಣದಲ್ಲಿರುವ ನಗರೇಶ್ವರ ಸ್ವಾಮಿಯ ದರ್ಶನ ಪಡೆಯುವಾಗ ಸಚಿವರು ಶೂ ಹಾಕಿಕೊಂಡೇ ಇದ್ದರು. ದೇವಸ್ಥಾನದ ಒಳಗೂ ಶೂ ಹಾಕಿಕೊಂಡೇ ನಡೆದಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಪ್ರಭು ಚವ್ಹಾಣ್​​ರ ಈ ಎಡವಟ್ಟು ಕೆಲಸಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ರಾಜರ ಆಡಳಿತದ ಕಾಲದಲ್ಲಿ ಕೋಟೆ ಆವರಣದ ನಗರೇಶ್ವರ ದೇವಸ್ಥಾನದಲ್ಲಿ ಋಷಿಮುನಿ, ಸಾಧು-ಸಂತರಿಂದ ಹೋಮ, ಪೂಜೆ, ಪುನಸ್ಕಾರಗಳು ನಡೆಯುತ್ತಿದ್ದವು. ಇಂತಹ ಪವಿತ್ರ ಸ್ಥಳದಲ್ಲಿ ಸಚಿವರು ಶ್ರಾವಣ ಮಾಸದಲ್ಲಿ ಶೂ ಹಾಕಿಕೊಂಡೇ ಸುತ್ತಾಡಿರುವುದು ಖಂಡನೀಯ ಎಂದು ಸಾಮಾಜಿಕ ಜಾಲತಾಣದಲ್ಲಿ ಭಕ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Edited By : Vijay Kumar
PublicNext

PublicNext

30/08/2021 04:08 pm

Cinque Terre

37.4 K

Cinque Terre

25

ಸಂಬಂಧಿತ ಸುದ್ದಿ