ಚಿತ್ರದುರ್ಗ : ರಾಜ್ಯದ ಪ್ರತಿ ಜಿಲ್ಲೆಗೊಂದು ಗೋಶಾಲೆ ತೆರೆಯಲು ಸರ್ಕಾರ ಮಟ್ಟದಲ್ಲಿ ಚಿಂತನೆ ನಡೆಸಲಾಗಿದೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದರು ಚಿತ್ರದುರ್ಗ ನಗರದ ಮುರುಘಾ ಮಠಕ್ಕೆ ಭೇಟಿ ನೀಡಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕರ್ನಾಟಕದಲ್ಲಿ ಗೋ ಹತ್ಯೆ ನಿಷೇಧ ಕಾಯ್ದೆ ನಮ್ಮ ಸರ್ಕಾರ ಸಂಕಲ್ಪವಾಗಿತ್ತು ಎಂದು ತಿಳಿಸಿದರು.
ಪ್ರತಿ ಜಿಲ್ಲೆಗೆ ಒಂದು ಗೋಶಾಲೆ ತೆರೆಯಲು ಚಿತಂನೆ ನಡೆದಿದ್ದು, ಗೋಶಾಲೆ ಆರಂಭಿಸಲು ಜಾಗವನ್ನು ಕೂಡಾ ಆಯ್ಕೆ ಮಾಡುತ್ತಿದ್ದೇವೆ ಎಂದರು. ದೇಶದ ಇತಿಹಾಸದಲ್ಲೇ ನಾವು ಪ್ರಾಣಿ ಸಹಾಯ ಕೇಂದ್ರ ಆರಂಭ ಮಾಡಿದ್ದೇವೆ.ಒಂದು ತಿಂಗಳಿನಲ್ಲಿ 10 ಸಾವಿರ ಕರೆ ಬಂದಿವೆ ಎಂದು ಸಚಿವರು ಹೇಳಿದರು.ಪಶು ಸಂಜೀವಿನಿ ಯೋಜನೆ, ಅಂಬ್ಯುಲೆನ್ಸ್, ವೈದ್ಯರ ನೇಮಕವಾಗಿದೆ. ಗೋ ಹತ್ಯೆ ಕಾನೂನು ಇಂಪ್ಲೀಮೆಂಟ್ ಮಾಡಲು ಸಂಪೂರ್ಣ ಶ್ರಮಿಸುತ್ತಿದ್ದೇನೆ.ಪಶು ಭಾಗ್ಯ ಕುರಿತು ಚಿಂತನೆ ನಡೆಯುತ್ತಿದೆ.ಇನ್ನು ಪಶು ಚಿಕಿತ್ಸೆ ಕುರಿತು ಶುಲ್ಕ ನಿಗದಿಯ ಚಿಂತನೆ ನಡೆದಿಲ್ಲ ಎಂದರು.
ಸದಾಶಿವ ಆಯೋಗದ ಕುರಿತು ಪ್ರತಿಕ್ರಿಯೆ ನೀಡಿರುವ ಸಚಿವರು ವಿಶ್ವರತ್ನ ಬಿ.ಆರ್. ಅಂಬೇಡ್ಕರ್ ಸಂವಿಧಾನ ಚೌಕಟ್ಟಿನಲ್ಲಿ ನಮ್ಮ ಸಮುದಾಯಕ್ಕೆ ಮೀಸಲಾತಿ ಮಾಡಿದ್ದಾರೆ. ಸದಾಶಿವ ಆಯೋಗ ಜಾರಿ ಕುರಿತು ಹಿಂದೆ ವಿರೋಧ ಮಾಡಿದ್ದೇವೆ. ಈಗಲೂ ಕೂಡಾ ನಮ್ಮ ವಿರೋಧ ಇದೆ. ಮುಂದೆ ಏನಾಗುತ್ತೋ ನೋಡೋಣಾ ಎಂದು ತಿಳಿಸಿದರು.ನಮ್ಮ ಸಮುದಾಯಕ್ಕೆ ಅನ್ಯಾಯ ಆಗಲ್ಲ ಎಂಬ ವಿಶ್ವಾಸ ಇದೆ.ಬೋವಿ, ಕೊರಚ, ಕೊರಮ, ಲಂಭಾಣಿಗರಿಗೆ ಅನ್ಯಾಯ ಆಗಲ್ಲ ಎಂಬ ಭರವಸೆ ಇದೆ.ನಮ್ಮ ಕೇಂದ್ರ ಮಂತ್ರಿ ನಾರಾಯಣ ಸ್ವಾಮಿ ಹೇಳಿದ್ದು ಗೊತ್ತಿಲ್ಲ, ನಮ್ಮ ಸ್ಟಾಂಡ್ ಮುಂದುವರಿಯುತ್ತದೆ ಎಂದು ಅಭಿಪ್ರಾಯಪಟ್ಟರು. ನಾನು ರಾಜ್ಯ ಮಂತ್ರಿ ಇದ್ದೇನೆ, ಅವರು ಕೇಂದ್ರ ಮಂತ್ರಿ ಇದ್ದಾರೆ, ನನ್ನ ಗಮನಕ್ಕೆ ಬಂದಿಲ್ಲ, ಮಾತನಾಡುವೆ ಎಂದು ಸಚಿವರು ಸುದ್ದಿಗಾರರಿಗೆ ತಿಳಿಸಿದರು.
PublicNext
28/08/2021 03:55 pm