ಮುಂಬೈ: 'ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಗೆ ಕಪಾಳಮೋಕ್ಷ ಮಾಡುತ್ತಿದ್ದೆ' ಎಂಬ ಹೇಳಿಕೆ ಹಿನ್ನೆಲೆಯಲ್ಲಿ ಕೇಂದ್ರ ಸಚಿವ ನಾರಾಯಣ ರಾಣೆ ಬಂಧಿಸಲಾಗಿತ್ತು. ಆದರೆ 7 ಗಂಟೆಗಳ ನಂತರ ಅವರಿಗೆ ಜಾಮೀನು ದೊರಕಿತ್ತು. ಈ ಬೆನ್ನಲ್ಲೇ "ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ಗೆ ಚಪ್ಪಲಿಯಲ್ಲಿ ಹೊಡೆಯಬೇಕು" ಎಂದು ಹೇಳಿದ್ದ ಉದ್ಧವ್ ಠಾಕ್ರೆ ಅವರು ಹಳೇ ವಿಡಿಯೋ ವೈರಲ್ ಆಗಿದೆ.
2018ರಲ್ಲಿ ಮಹಾರಾಷ್ಟ್ರಕ್ಕೆ ಬಂದಿದ್ದ ಸಿಎಂ ಯೋಗಿ ಆದಿತ್ಯನಾಥ್ ಅವರು ಚಪ್ಪಲಿ ಹಾಕಿಕೊಂಡೇ ಶಿವಾಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿದ್ದರು. ಈ ಸಮಯದಲ್ಲಿ ಶಿವಸೇನೆ ಮುಖ್ಯಸ್ಥರಾಗಿದ್ದ ಉದ್ಧವ್ ಠಾಕ್ರೆ, 'ಶಿವಾಜಿ ಮಹಾರಾಜರಿಗೆ ಯೋಗಿ ಅವಮಾನ ಮಾಡಿದ್ದಾರೆ. ಅವರಿಗೆ ಅದೇ ಚಪ್ಪಲಿಯಲ್ಲಿ ಹೊಡೆಯಬೇಕು' ಎಂದು ಹೇಳಿಕೆ ನೀಡಿದ್ದರು.
PublicNext
26/08/2021 01:19 pm