ಹೈದರಾಬಾದ್: ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್‌ಎಸ್) ನಾಯಕ, ಸಚಿವ ಮಿನ್ ಮಲ್ಲಾ ರೆಡ್ಡಿ ಅವರು ತೊಡೆತಟ್ಟಿ ತೆಲಂಗಾಣ ಕಾಂಗ್ರೆಸ್ ರಾಜ್ಯಾಧ್ಯಕ್ಷ, ಸಂಸದ ರೇವಂತ್ ರೆಡ್ಡಿ ಅವರಿಗೆ ಬಹಿರಂಗವಾಗಿ ಸವಾಲು ಹಾಕಿದ್ದಾರೆ.
ಸಮಾವೇಶವೊಂದಲ್ಲಿ ಮಾತನಾಡಿದ ಸಚಿವ ಮಿನ್ ಮಲ್ಲಾ ರೆಡ್ಡಿ ಅವರು ಕಾಂಗ್ರೆಸ್‌ನ ಸಂಸದ ರೇವಂತ್ ರೆಡ್ಡಿ ವಿರುದ್ಧ ಅವಾಚ್ಯ ಪದಗಳನ್ನು ಬಳಸಿ ವಾಗ್ದಾಳಿ ನಡೆಸಿದ್ದಾರೆ. "ಮುಖಾಮುಖಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸೋಣ ಬಾ. ನೀವು ಗೆದ್ದರೆ ನಾನು ರಾಜಕೀಯಕ್ಕೆ ವಿದಾಯ ಹೇಳುವೆ. ನಿನಗೆ ತಾಕತ್ತು ಇದ್ದರೆ ನೀನು ಗೆಲ್ಲುತ್ತೀಯ" ಎಂದು ಸವಾಲು ಹಾಕಿದ್ದಾರೆ. ಅಷ್ಟೇ ಅಲ್ಲದೆ ವೇದಿಕೆ ಮೇಲೆ ತೊಡೆ ತಟ್ಟಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
PublicNext
26/08/2021 12:08 pm