ಹಾವೇರಿ: ಕೃಷಿ ಸಚಿವ ಬಿ.ಸಿ ಪಾಟೀಲ್ ಅವರು ಮಾಜಿ ಸಿಎಂ ಕುಮಾರಸ್ವಾಮಿ ವಿರುದ್ಧ ಅಸಮಾಧಾನಿತರಾಗಿದ್ದಾರೆ. 'ಅತಿಯಾಗಿ' ಹೊಗಳುವ ಮೂಲಕ ಲೇವಡಿ ಮಾಡಿದ್ದಾರೆ.
ಕುಮಾರಸ್ವಾಮಿ ಮಹಾನ್ ಮಹಾನ್ ಪ್ರಾಮಾಣಿಕ, ಸತ್ಯ ಹರಿಶ್ಚಂದ್ರನ ಎರಡನೇ ಕುಡಿ. ಪ್ರಾಮಾಣಿಕತೆಗೆ ಹೆಸರಾದವರು ಅಂದ್ರೆ ಕುಮಾರಸ್ವಾಮಿ. ಕುಮಾರಸ್ವಾಮಿ ನಾಮಿನೇಶನ್ ಕೊಟ್ಟ ಮೇಲೆ ಕ್ಷೇತ್ರಕ್ಕೆ ಹೋಗೋದಿಲ್ಲ. ಜನರೇ ಅವರನ್ನ ಆಯ್ಕೆ ಮಾಡುತ್ತಾರೆ. ಅವರು ಯಾವುದೇ ಒಂದು ಪೈಸೆ ಖರ್ಚು ಮಾಡೋದಿಲ್ಲ. ಅವರಂಥಾ ಪ್ರಾಮಾಣಿಕ ವ್ಯಕ್ತಿಯನ್ನ ನಾನು ಇದುವರೆಗೆ ಜೀವನದಲ್ಲಿ ನೋಡಿಯೇ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ವಿರುದ್ಧ ಕೃಷಿ ಸಚಿವ ಬಿ.ಸಿ ಪಾಟೀಲ್ ಕಿಡಿಕಾರಿದರು.
ಹಾವೇರಿ ಜಿಲ್ಲೆ ರಟ್ಟೀಹಳ್ಳಿ ತಾಲೂಕಿನ ಮದಗಮಾಸೂರು ಐತಿಹಾಸಿಕ ಕೆರೆಗೆ ಬಾಗಿನ ಅರ್ಪಿಸಿದ ನಂತರ ಮಾತನಾಡಿದ ಅವರು, ಮಾಜಿ ಸಿ.ಎಂ ಕುಮಾರಸ್ವಾಮಿ ಅವರು ದುರಹಂಕಾರದಿಂದ, ಸ್ವೇಚ್ಛಾಚಾರದಿಂದ ಮುಖ್ಯಮಂತ್ರಿ ಸ್ಥಾನ ಕಳೆದುಕೊಂಡಿದ್ದಾರೆ. ಸಿಎಂ ಸ್ಥಾನ ಹೋದ ನಂತರ ಮೀನನ್ನು ಹೊರಗೆ ಹಾಕಿದಂತಾಗಿದೆ. ಅವರು ಕೇವಲ ಎರಡು ಜಿಲ್ಲೆಗೆ ಸೀಮಿತವಾಗಿದ್ದ ಸಿಎಂ ಆಗಿದ್ದರು. ಹೀಗಾಗಿ ಅವರನ್ನು ಅನಿವಾರ್ಯವಾಗಿ ಅಧಿಕಾರದಿಂದ ಕೆಳಗಿಳಿಸಿದ್ದೇವೆ ಎಂದು ಬಿ.ಸಿ ಪಾಟೀಲ್ ಕುಮಾರಸ್ವಾಮಿ ಮೇಲೆ ವಾಗ್ದಾಳಿ ನಡೆಸಿದ್ದಾರೆ.
PublicNext
24/08/2021 04:48 pm