ನವದೆಹಲಿ: ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ ಕೇಂದ್ರ ಸಚಿವ ನಾರಾಯಣ ರಾಣೆ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿದೆ. ಆಡಳಿತಾರೂಢ ಶಿವಸೇನೆ ಮತ್ತು ಅದರ ಯುವ ಸಂಘಟನೆ ಯುವ ಸೇನಾದ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಕೇಂದ್ರ ಸಚಿವರ ಬಂಧನಕ್ಕೆ ಆಗ್ರಹಿಸಿದ್ದಾರೆ.
ರಾಯಗಢ ಜಿಲ್ಲೆಯಲ್ಲಿ ಸೋಮವಾರ ನಡೆದ ಅಂತಹ ಕಾರ್ಯಕ್ರಮವೊಂದರಲ್ಲಿ ಮಾತನಾಡುವಾಗ ರಾಣೆ ನೀಡಿದ ಹೇಳಿಕೆ ಜಗಳಕ್ಕೆ ಕಾರಣವಾಗಿದೆ. ಶಿವ ಸೇನೆಯ ಕೆಲವು ಕಾರ್ಯಕರ್ತರು ನಾಸಿಕ್‌ನ ಬಿಜೆಪಿ ಕಚೇರಿ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಇನ್ನೂ ಕೆಲವರು ಮುಂಬೈನ ರಾಣೆ ಅವರ ಜುಹು ನಿವಾಸದ ಹೊರಗೆ ಜಮಾಯಿಸಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಇತ್ತ ಬಿಜೆಪಿ ಕಾರ್ಯಕರ್ತರು ಸಹ ಕೇಂದ್ರ ಸಚಿವರನ್ನು ಬೆಂಬಲಿಸಿದ ಪರಿಣಾಮ ಪರಿಸ್ಥಿತಿ ಮತ್ತಷ್ಟು ಉದ್ವಿಗ್ನವಾಗಿದೆ.
ಇನ್ನು ಚಿಪ್ಲುನ್‌ನಲ್ಲಿ ಸೇನಾ ಕಾರ್ಯಕರ್ತರು ರಾಣೆ ಅವರ ಪೋಸ್ಟರ್‌ಗಳನ್ನು ಹರಿದು ಹಾಕಿದ್ದಾರೆ. ಅಷ್ಟೇ ಅಲ್ಲದೆ ಯಾವುದೇ ಕಾರ್ಯಕ್ರಮವನ್ನು ನಡೆಸಲು ಅವಕಾಶ ನೀಡುವುದಿಲ್ಲ ಎಂದು ಘೋಷಣೆ ಕೂಗಿದರು.
PublicNext
24/08/2021 03:33 pm