ಮೈಸೂರು: ಆರ್‌ಎಸ್‌ಎಸ್ ಹಾಗೂ ತಾಲಿಬಾನ್ ನಡುವೆ ಹೋಲಿಕೆ ಇದೆ. ಹೀಗಾಗಿ ಆರ್‌ಎಸ್‌ಎಸ್ ಕೂಡ ತಾಲಿಬಾನ್ ಸಂಘಟನೆ ಇದ್ದಂತೆ ಎಂದು ಚಾಮರಾಜನಗರ ಮಾಜಿ ಸಂಸದ ಹಾಗೂ ಕೆ.ಪಿ.ಸಿ.ಸಿ. ಕಾರ್ಯಧ್ಯಕ್ಷ ಆರ್. ಧ್ರುವ ನಾರಾಯಣ್ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, 'ಆರ್‌ಎಸ್‌ಎಸ್‌ನಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಇಲ್ಲ. ಧರ್ಮ ಇಟ್ಕೊಂಡು ಆರ್‌ಎಸ್‌ಎಸ್, ತಾಲಿಬಾನ್ ಕೆಲಸ ಮಾಡುತ್ತಿದೆ. ನನ್ನ ವಿರುದ್ಧ ಆರ್‌ಎಸ್‌ಎಸ್, ಬಿಜೆಪಿಯವರು ಏನೇ ಹೋರಾಟ ಮಾಡಿದರೂ ನನ್ನ ಹೇಳಿಕೆಗೆ ನಾನು ಬದ್ಧ’ ಎಂದು ಸವಾಲು ಹಾಕಿದ್ದಾರೆ.
PublicNext
23/08/2021 08:28 pm