ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಸಿಎಂ ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಿ ಮೋದಿ ಸಂತಾಪ

ನವದೆಹಲಿ; ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಕಲ್ಯಾಣ್ ಸಿಂಗ್ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ, ಉಪ ರಾಷ್ಟ್ರಪತಿ ವೆಂಕಯ್ಯನಾಯ್ಡು, ಸಿಎಂ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, ಕಲ್ಯಾಣ್ ಸಿಂಗ್ ಜೀ ನಿಧನದಿಂದ ತುಂಬಾ ದುಃಖವಾಗಿದೆ. ರಾಜನೀತಿಜ್ಞ, ಹಿರಿಯ ಆಡಳಿತಗಾರ, ತಳಮಟ್ಟದ ನಾಯಕ ಮತ್ತು ಮಹಾನ್ ಮಾನವ. ಉತ್ತರ ಪ್ರದೇಶದ ಅಭಿವೃದ್ಧಿಗೆ ಅವರ ಕೊಡಿಗೆ ಅಪಾರ. ಅವರ ಪುತ್ರ ರಾಜವೀರ್ ಸಿಂಗ್ ಅವರನ್ನು ಮಾತನಾಡಿಸಿ ಸಾಂತ್ವನ ಹೇಳಿರುವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಅವರ ಅಂತಿಮ ಸಂಸ್ಕಾರವನ್ನು ಆಗಸ್ಟ್ 23ರ ಸಂಜೆ ನರೋರಾದ ಗಂಗಾ ತೀರದಲ್ಲಿ ನೆರವೇರಿಸಲಾಗುತ್ತದೆ. ಆಗಸ್ಟ್ 23 ರಂದು ಸಾರ್ವಜನಿಕ ರಜೆ ಘೋಷಿಸಲಾಗಿದೆ ಎಂದು ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

Edited By : Nagaraj Tulugeri
PublicNext

PublicNext

22/08/2021 08:33 am

Cinque Terre

64.33 K

Cinque Terre

4

ಸಂಬಂಧಿತ ಸುದ್ದಿ