ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

'ತಾಲಿಬಾನಿಗಳನ್ನು ನೋಡಿ ಕೇಂದ್ರ ಸರ್ಕಾರ ಪಾಠ ಕಲಿಯಲಿ': ಮೆಹಬೂಬಾ ಮುಫ್ತಿ

ಶ್ರೀನಗರ: ಅಫ್ಗಾನಿಸ್ತಾನವನ್ನು ತಾಲಿಬಾನ್ ವಶಕ್ಕೆ ತೆಗೆದುಕೊಂಡಿರುವುದನ್ನು ಉಲ್ಲೇಖಿಸಿ, ನೆರೆ ರಾಷ್ಟ್ರದ ಘಟನೆಯಿಂದ ಕೇಂದ್ರ ಸರ್ಕಾರ ಪಾಠ ಕಲಿಯಬೇಕು. ಜಮ್ಮು ಮತ್ತು ಕಾಶ್ಮೀರದ ಜನರೊಂದಿಗೆ ಮಾತುಕತೆ ನಡೆಸಬೇಕು, ವಿಶೇಷ ಸ್ಥಾನಮಾನ ವಾಪಸ್ ನೀಡಬೇಕು ಎಂದು ಕಾಶ್ಮೀರದ ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಹೇಳಿದ್ದಾರೆ.

ಅಫ್ಘಾನಿಸ್ತಾನದಲ್ಲಿ ಅಷ್ಟು ಬಲಿಷ್ಠವಾದ ಅಮೆರಿಕದ ಸೈನಿಕರಿದ್ದರೂ ತಾಲಿಬಾನಿಗಳು ಅವರನ್ನು ಯಶಸ್ವಿಯಾಗಿ ಹೊರಹಾಕಿದರು. ಅದನ್ನು ನೋಡಿ ಮೋದಿ ಅವರ ಸರ್ಕಾರ ಪಾಠ ಕಲಿಯಬೇಕು. ಕಾಶ್ಮೀರದ ಜನರೊಂದಿಗೆ ಕೂಡಲೇ ಮಾತುಕತೆ ನಡೆಸಿ, ವಿಶೇಷ ಸ್ಥಾನಮಾನ ಮರುಸ್ಥಾಪಿಸಬೇಕು. ಇಲ್ಲದಿದ್ದರೆ, ಏನಾದರೂ ಆಗಬಹುದು ಎಂದು ಮೆಹಬೂಬಾ ಮುಫ್ತಿ ಎಚ್ಚರಿಕೆ ನೀಡಿದರು.

ದೇಶದ ಮುಖ್ಯವಾಹಿನಿಯಲ್ಲಿರುವ ಬಹುತೇಕ ಮೀಡಿಯಾಗಳೂ ಕೂಡ ತಾಲಿಬಾನೀಕರಣಗೊಂಡಿವೆ. ಬಿಜೆಪಿ ಅಗತ್ಯಕ್ಕೆ ತಕ್ಕಂತೆ ಕೆಲಸ ಮಾಡುತ್ತಿವೆ. ಹಲವು ಸಂಸ್ಥೆಗಳ ದುರುಪಯೋಗ ಆಗುತ್ತಿರುವ ಬಗ್ಗೆ ಆ ಮಾಧ್ಯಮಗಳು ಏನೂ ಮಾತನಾಡುತ್ತಿಲ್ಲ ಎಂದರು.

Edited By : Vijay Kumar
PublicNext

PublicNext

21/08/2021 10:43 pm

Cinque Terre

44.34 K

Cinque Terre

42